- Advertisement -
- Advertisement -
ವಿಟ್ಲ: ಕಳವಾದ ಮೊಬೈಲನ್ನು ನೂತನವಾಗಿ ಅನುಷ್ಠಾನಗೊಂಡಿರುವ CEIR Portal ಸಹಾಯದಿಂದ ವಿಟ್ಲ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
ಕಳವಾದ/ಕಳೆದುಹೋದ/ಸುಲಿಗೆಯಾದ ಮೊಬೈಲ್ ಫೋನ್ ಗಳ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನೂತನವಾಗಿ ಅನುಷ್ಠಾನಗೊಂಡಿರುವ CEIR Portal ಸಹಾಯದಿಂದ ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್ನ್ನು CEIR Portal ಸಹಾಯದಿಂದ ಪತ್ತೆಹಚ್ಚಿ ವಿಟ್ಲ ಪೊಲೀಸ್ ಠಾಣಾ ಅಧಿಕಾರಿ H.E ನಾಗರಾಜ್ ವಾರಸುದಾರರಿಗೆ ಹಿಂತಿರುಗಿಸಿದರು. ಇಲ್ಲಿಯವರೆಗೆ CEIR Portal ಸಹಾಯದಿಂದ 2ಮೊಬೈಲ್ ಫೋನ್ ಪತ್ತೆ ಮಾಡಿ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.
- Advertisement -