Saturday, June 28, 2025
spot_imgspot_img
spot_imgspot_img

ವಿಟ್ಲ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ವಿಟ್ಲ ಪೊಲೀಸರಿಂದ ದಾಳಿ; ನಗದು 9ಕೋಳಿ ಸಹಿತ, 15 ಮಂದಿ ವಶಕ್ಕೆ..!

- Advertisement -
- Advertisement -

ವಿಟ್ಲ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು 15 ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಕುಳ ಗ್ರಾಮದ ಪಾಂಡೇಲು ಎಂಬಲ್ಲಿ ನಡೆದಿದೆ.

1) ಭರತ್ 2] ಬಾಲಕೃಷ್ಣ 3] ಸಂಜೀವ 4] ಶೇಷಪ್ಪ ಗೌಡ 5) ಜನಾರ್ಧನ 6) ಭಾಸ್ಕರ 7) ಗೋಪಾಲ ಕೆ 8) ರಾಮಚಂದ್ರ 9) ವಿಶ್ವನಾಥ 10) ಕೃಷ್ಣಪ್ಪ ಪೂಜಾರಿ 11) ಗಿರೀಶ್ 12) ಅವಿನಾಶ್ 13) ಸಂತೋಷ್ 14) ರುಕ್ಮಯ್ಯ 15) ರಕ್ಷೀತ್ ಪೊಲೀಸರು ವಶಕ್ಕೆ ಪಡೆದ ಆರೋಪಿಗಳು.

ಕುಳ ಗ್ರಾಮದ ಪಾಂಡೇಲು ಎಂಬಲ್ಲಿ ಕಾನೂನು ಬಾಹಿರವಾಗಿ ಕೋಳಿ ಅಂಕ ಜೂಜು ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಎ ಸಿ ಜೆ ಮತ್ತು ಜೆ ಎಮ್ ಸಿ ನ್ಯಾಯಾಲಯದ ನ್ಯಾಯಾದೀಶರ ಅನುಮತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.

ಕೋಳಿ ಅಂಕ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ 6590 ರೂ ಹಾಗೂ ವಿವಿಧ ಜಾತಿಯ 9 ಹುಂಜಾ ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!