Sunday, May 19, 2024
spot_imgspot_img
spot_imgspot_img

ಸೆ.5: ಉಕ್ಕುಡ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆ

- Advertisement -G L Acharya panikkar
- Advertisement -

ವಿಟ್ಲ:-ಉಕ್ಕುಡ ಪಬ್ಲಿಕ್ ಸ್ಕೂಲ್ ಹಾಗೂ ವಿಟ್ಲ ರಾಜಧಾನಿ ಜ್ಯುವೆಲ್ಲರ್ಸ್ ಸಹಯೋಗದೊಂದಿಗೆ ಸೆಪ್ಟಂಬರ್ 5 ಶನಿವಾರ ಬೆಳಿಗ್ಗೆ 10.30ಕ್ಕೆ ಶಿಕ್ಷಕರ ದಿನಾಚರಣೆ ಸಮಾರಂಭವು ಉಕ್ಕುಡ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಲಿದೆ.

ನಿವೃತ್ತ ಶಿಕ್ಷಕರಾದ ಕಾನ ಈಶ್ವರ ಭಟ್, ಅಬೂಬಕರ್ ಕರೋಪಾಡಿ, ಜೂಲಿಯಾನ ಮೇರಿ ಲೋಬೋ ಅವರನ್ನು ಗೌರವಿಸಲಾಗುವುದು. ಜೊತೆಗೆ ಸೌಹಾರ್ದ ಸ್ನೇಹಕೂಟ ನಡೆಯಲಿದೆ. ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ರಶೀದ್ ವಿಟ್ಲ ಸ್ನೇಹಕೂಟದ ಅಧ್ಯಕ್ಷತೆ ವಹಿಸಲಿದ್ದು, ರಾಜಧಾನಿ ಜ್ಯುವೆಲ್ಲರ್ಸ್ ಮಾಲಕರಾದ ತಾನಾಜಿ ಬಾಬರ್ ಉಪಸ್ಥಿತರಿರುವರು ಎಂದು ಸ್ಕೂಲ್ ಕಾರ್ಯದರ್ಶಿ ಹನೀಫ್ ಕುದ್ದುಪದವು ಹಾಗೂ ಸಂಚಾಲಕ ಅಬೂಬಕರ್ ಟೆಲಿಫೋನ್ ತಿಳಿಸಿದ್ದಾರೆ.

- Advertisement -

Related news

error: Content is protected !!