Friday, July 24, 2026
spot_imgspot_img
spot_imgspot_img

ವಿಟ್ಲ: ಅತ್ಯುನ್ನತ ಗುಣಮಟ್ಟದ ವಿವಿಧ ತಳಿಯ ಅಡಿಕೆ, ತೆಂಗು ಮತ್ತು ಕಾಳುಮೆಣಸು ಗಿಡಗಳು ಚಂದಪ್ಪಾಡಿ ನರ್ಸರಿಯಲ್ಲಿ ಲಭ್ಯ..!

- Advertisement -
- Advertisement -
driving

ವಿಟ್ಲ: ಕಳೆದ ಹತ್ತಾರು ವರ್ಷಗಳಿಂದ ಅತ್ಯುನ್ನತ ಗುಣಮಟ್ಟದ ಅಡಿಕೆ ಸಸಿ, ಕಾಳು ಮೆಣಸಿನ ಸಸಿಯನ್ನು ವಿಟ್ಲದ ಚಂದಪ್ಪಾಡಿಯ ಲೋಕಯ್ಯ ಅವರು ಉತ್ಪಾದಿಸಿ ಕೃಷಿಕರ ಪಾಲಿಗೆ ಆಶಾಕಿರಣವಾಗಿದ್ದಾರೆ.

ಅತ್ಯುತ್ತಮ ಗುಣಮಟ್ಟ, ವೈಜ್ಞಾನಿಕ ವಿಧಾನದಲ್ಲಿ, ಆಯ್ದ ಶ್ರೇಷ್ಠ ಗುಣಮಟ್ಟದ ಅಡಿಕೆಯನ್ನು ಆಯ್ದು ಗಿಡಗಳನ್ನು ಉತ್ಪತ್ತಿ ಮಾಡಲಾಗುತ್ತದೆ. ಕೃಷಿಕರ ಅನುಕೂಲತೆಗೆ ತಕ್ಕಂತೆ ಸೂಕ್ತ ಸಮಯದಲ್ಲಿ ಎಷ್ಟು ಬೇಕಾದರೂ ಪೂರೈಕೆ ಮಾಡುತ್ತಾರೆ. ಅಡಿಕೆಯ ಪ್ರಮುಖ ತಳಿಗಳಾದ ಇಂಟರ್ ಸಿ ಮಂಗಳ, ಮಂಗಳ, ಸುಮಂಗಳ, ಮೋಹಿತ್ ನಗರ, ಸೈಗೋನ್, ಸುವರ್ಣ ಮಂಗಳ, ಶತಮಂಗಳ, ರತ್ನಗಿರಿ, ಕುಬ್ಜ ತಳಿಯ (ಡ್ವರ‍್ಫ್) ಮತ್ತು ಊರ ಅಡಿಕೆ ಗಿಡಗಳು ಆಕರ್ಷಕ ದರದಲ್ಲಿ ಲಭ್ಯವಿದೆ. ಅಂತೆಯೇ ಇದನ್ನು ಸಾಗಿಸಲು ವಾಹನದ ಸೌಲಭ್ಯವೂ ಇಲ್ಲಿದೆ.

ಕಸಿ ಕಟ್ಟಿದ (ಗ್ರಾಫ್ಟಿಂಗ್ ವಿಧಾನ) ಉತ್ತಮ ಗುಣಮಟ್ಟದ ಕಾಳು ಮೆಣಸಿನ ಗಿಡಗಳೂ ಲಭ್ಯವಿದೆ. ಉತ್ತಮ ತಳಿಯ ವಿವಿಧ ತೆಂಗಿನ ಗಿಡಗಳೂ ಇಲ್ಲಿ ಲಭ್ಯವಿದೆ.

ವಿಟ್ಲ ಕಾಸರಗೋಡು ರಸ್ತೆಯ ಕಾಶಿಮಠದಿಂದ 1 ಕಿ.ಮೀ ದೂರದಲ್ಲಿರುವ ಚಂದಪ್ಪಾಡಿ ಎಂಬಲ್ಲಿ ಈ ನರ್ಸರಿ ಇದೆ.

ಲೋಕೆಶನ್: https://g.page/chandappady?share
ಹೆಚ್ಚಿನ ಮಾಹಿತಿಗಾಗಿ : 9480056472, 9980479635
.

- Advertisement -

Related news

error: Content is protected !!