Monday, July 7, 2025
spot_imgspot_img
spot_imgspot_img

ವಿಟ್ಲ: ಜ. 31ರಂದು ಚಂದಳಿಕೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಜ್ರ ಮಹೋತ್ಸವ

- Advertisement -
- Advertisement -
suvarna gold

ವಿಟ್ಲ: ಚಂದಳಿಕೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಜ್ರ ಮಹೋತ್ಸವವು ಜ. 31 ರ ಸೋಮವಾರದಂದು ನಡೆಯಲಿದೆ.

ಬೆಳಗ್ಗೆ 9:30 ಕ್ಕೆ ದ್ವಜಾರೋಹಣ, 10:00 ಗಂಟೆಗೆ ಬಹುಮಾನ ವಿತರಣೆ, ಸಭಾಕಾರ್ಯಕ್ರಮ ನಡೆಯಲಿದೆ. ಬಳಿಕ ಚಂದಳಿಕೆ ಅಂಗನವಾಡಿ ಪುಟಾಣಿಗಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ -2022 ನಡೆಯಲಿದೆ.

ಎಂ.ಆರ್.ಪಿ.ಎಲ್, ಸಿ.ಎಸ್.ಆರ್ ನಿಧಿಯಿಂದ ನಿರ್ಮಾಣಗೊಂಡ ಮತ್ತು ಎಸ್.ಎಲ್ ವಿ ಬುಕ್ ಏಜೇನ್ಸೀಸ್’ಯಿಂದ ನಿರ್ಮಾಣಗೊಂಡ ಕೊಠಡಿಗಳ ಉದ್ಘಾಟನೆಯು ಅಪರಾಹ್ನ 4:30ಕ್ಕೆ ನಡೆಯಲಿದೆ.

vtv vitla
vtv vitla

ಕಾರ್ಯಕ್ರಮದ ದೀಪೋಜ್ವಲನೆಯನ್ನು ಎಂ.ಆರ್.ಪಿ.ಎಲ್.ನ ಗ್ರೂಪ್ ಜನರಲ್ ಮೆನೇಜರ್(ಎಚ್.ಆರ್) ಕೃಷ್ಣ ಹೆಗ್ಡೆ ನೆರವೇರಿಸಲಿದ್ದಾರೆ. ವಜ್ರಭವನವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಎಸ್ ಎಲ್ ವಿ ಕೊಠಡಿಯನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ವಜ್ರಮುಷ್ಠಿ ಸಭಾಂಗಣವನ್ನು ಎಸ್. ಎಲ್. ವಿ ಬುಕ್ ಏಜೇನ್ಸೀಸ್ ನ ಮಾಲಕರಾದ ದಿವಾಕರ ದಾಸ್ ನೇರ್ಲಾಜೆ ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ ಹಸ್ತ ಪತ್ರಿಕೆ ಬಿಡುಗಡೆ, ವಜ್ರ ಸಂಭ್ರಮ ಸಂಚಿಕೆ ಬಿಡುಗಡೆ, ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ, ಪ್ರೋಜೆಕ್ಟರ್ ಉದ್ಘಾಟನೆ, ಕುಡಿಯುವ ನೀರಿನ ಘಟಕ ಉದ್ಘಾಟನೆಯನ್ನು ವಿವಿಧ ಕ್ಷೇತ್ರದ ಗಣ್ಯರು ಉದ್ಘಾಟಿಸಲಿದ್ದಾರೆ.

- Advertisement -

Related news

error: Content is protected !!