Monday, June 22, 2026
spot_imgspot_img
spot_imgspot_img

ವಿಟ್ಲ ಪಂಚಲಿಂಗೇಶ್ವರ ದೇವರ ಸಿಮಗುಡ್ಡೆದ ಅರಸು ತುಳು ಭಕ್ತಿಗೀತೆಯ ಪೋಸ್ಟರ್ ಬಿಡುಗಡೆ

- Advertisement -
- Advertisement -

ದಯಾ ಕ್ರಿಯೇಷನ್ ಅರ್ಪಿಸುವ, ಕೃಷ್ಣಯ್ಯ ಕೆ ವಿಟ್ಲ ಅರಮನೆ ಇವರ ಶುಭ ಆಶೀರ್ವಾದದಲ್ಲಿ ಸಿಮಗುಡ್ಡೆದ ಅರಸು ವಿಟ್ಲ ಪಂಚಲಿಂಗೇಶ್ವರ ದೇವರ ” ತುಳು ಭಕ್ತಿ ಗೀತೆ ವಿಡಿಯೋ ಸಾಂಗ್‌ನ ಬಿಡುಗಡೆಯ ಪೋಸ್ಟರ್ ಬಿಡುಗಡೆಗೊಂಡಿದೆ.

ಸಿಮಗುಡ್ಡೆದ ಅರಸು ಈ ತುಳು ಭಕ್ತಿ ಗೀತೆ ಗೆ ದಿನೇಶ್ ಕೂಡವೂರು ಸಾಹಿತ್ಯ ಬರೆದಿದ್ದಾರೆ. ತನುಷ ಎಸ್ ಕುಂದರ್ ಬ್ರಹ್ಮವರ ಗಾಯನದಲ್ಲಿ ಮೂಡಿಬರಲಿದೆ. ಈ ಭಕ್ತಿ ಗೀತೆಯ ನಿರ್ಮಾಣ ಚರಣ್ ಪೂಜಾರಿ ಪುಣಚ ಮನೋಜ್ ಕುಮಾರ್ ಅವರದ್ದಾಗಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ಅವರ ಸಲಹೆ ಸಹಕಾರವಿದೆ. ದಯಾನಂದ ಅಮೀನ್ ಬಾಯರ್, ಗಂಗಾಧರ್ ವಿಟ್ಲ ಸಹಕರಿಸಿದ್ದಾರೆ.

ನೃತ್ಯ ಸಂಯೋಜನೆ ಕಿರಣ್ ಉಳ್ಳಾಲ್, ಛಾಯಾಗ್ರಾಹಣ ಸುಭಾಷ್ ಮಾಡಿದ್ದಾರೆ. ಈ ಆಲ್ಬಂ ಸಾಂಗ್ 14 -3-2022 ಸೋಮವಾರ ವಿಟ್ಲ ಪಂಚಲಿಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳ್ಳಲಿದೆ.

- Advertisement -

Related news

error: Content is protected !!