Saturday, June 28, 2025
spot_imgspot_img
spot_imgspot_img

ವಿಟ್ಲ: ಭಾರೀ ಮಳೆಗೆ ಜಲಾವೃತಗೊಂಡ ಮನೆಗಳು; ಜನ-ಜೀವನ ಅಸ್ತವ್ಯಸ್ತ

- Advertisement -
- Advertisement -

ವಿಟ್ಲ: ನಿನ್ನೆ ತಡರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳು ಜಲಾವೃತವಾಗಿದೆ. ವಿಟ್ಲದ ಅಡ್ಡದ ಬೀದಿ, ಬೊಬ್ಬೆಕೇರಿಯ ವಿದ್ಯಾನಗರದಲ್ಲಿರುವ ಮನೆಗಳು ಜಲಾವೃತಗೊಂಡಿದೆ.

ವಿಟ್ಲದ ಬಾಕಿಮಾರ್ ಗದ್ದೆಯ ಪಕ್ಕದಲ್ಲಿರುವ ಸಾರ್ವಜನಿಕ ಚರಂಡಿಯಲ್ಲಿ ಮೆಸ್ಕಾಂ ಗುತ್ತಿಗೆದಾರರು ಕಾಮಗಾರಿ ನಡೆಸುವ ವೇಳೆ ಪೈಪುಗಳನ್ನು ಚರಂಡಿ ಮೂಲಕ ಅಳವಡಿಸಿದ್ದರಿಂದ ಚರಂಡಿಯಲ್ಲಿ ನೀರು ಹರಿಯದೇ ಪಕ್ಕದ ಮನೆ ಮತ್ತು ಅಂಗಡಿಗಳ ಆವರಣಕ್ಕೆ ನುಗ್ಗಿದೆ. ಅದಲ್ಲದೇ ಅಡ್ಡದ ಬೀದಿ ಕೂಡಾ ಸಂಪೂರ್ಣವಾಗಿ ಜಲಾವೃತವಾಗಿದೆ.

ವಿಟ್ಲದ ಬೊಬೈಕೇರಿ ವಿದ್ಯಾನಗರದಲ್ಲಿರುವ ಮೋನಪ್ಪ ಶೆಟ್ಟಿ, ದಿನೇಶ್ ಪೂಜಾರಿ, ನಾರಾಯಣ ಗೌಡ, ನಾರಾಯಣ ಪೂಜಾರಿ ಮತ್ತು ಇತರ ಕೆಲವುಗಳಿಗೆ ಮಳೆ ನೀರು ನುಗ್ಗಿ ತೊಂದರೆ ಅನುಭವಿಸುತ್ತಿದ್ದಾರೆ.

ಕೆಲವು ಖಾಸಗಿ ವ್ಯಕ್ತಿಗಳು ಚರಂಡಿ ಒತ್ತುವರಿ ಮಾಡಿದ್ದರಿಂದ ಮತ್ತು ಹೆದ್ದಾರಿಯ ಕಾಮಗಾರಿ ವೇಳೆ ಚರಂಡಿ ಮುಚ್ಚಿದ್ದರಿಂದ ನೀರು ಹರಿಯಲು ವ್ಯವಸ್ಥೆ ಇಲ್ಲದೇ ಪ್ರವಾಹ ಸೃಷ್ಟಿಯಾಗಿದೆ. ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಗೆ ಹೋಗುವ ಒಳದಾರಿ ಕೂಡಾ ಜಲಾವೃತಗೊಂಡು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ.

ಇದನ್ನೂ ಓದಿ:ವಿಟ್ಲ: ಹೊಳೆಯಂತಾದ ರಸ್ತೆ; ವಾಹನ ಸವಾರರ ಪರದಾಟ

ವಿಟ್ಲ: ರಸ್ತೆಯಲ್ಲಿಯೇ ಹರಿಯುತ್ತಿರುವ ನೀರು – ವಾಹನ ಸವಾರರಿಗೆ ತೊಂದರೆ

- Advertisement -

Related news

error: Content is protected !!