Sunday, August 9, 2026
spot_imgspot_img
spot_imgspot_img

ವಿಟ್ಲ: ಸಂಚಾರಕ್ಕೆ ತೊಡಕಾದ ಕಾರು ಪಾರ್ಕಿಂಗ್ ; ಕಾರನ್ನೆತ್ತಿ ಪಕ್ಕಕ್ಕಿಟ್ಟ ಸಾರ್ವಜನಿಕರು..!

- Advertisement -
- Advertisement -

ವಿಟ್ಲ: ಅಪರಿಚಿತ ಕಾರೊಂದು ಪಾರ್ಕ್‌ ಮಾಡಿದ ಹಿನ್ನಲೆ ವಾಹನ ಸವಾರರು ತೊಂದರೆ ಅನುಭವಿಸಿದ ಘಟನೆ ನಡೆದಿದೆ. ಮೊದಲೇ ವಿಟ್ಲ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಜಾಸ್ತಿಯಾಗಿದ್ದು ಕಾರು ಪಾರ್ಕಿಂಗ್‌ನಿಂದ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ.

ವಿಟ್ಲ ಪುತ್ತೂರು ರಸ್ತೆಯ ಮೇಗಿನಪೇಟೆಯಲ್ಲಿರುವ ಜೈನ ಬಸದಿ ಮುಂಭಾಗದ ರಸ್ತೆಯಲ್ಲಿ ಕಾರು ಪಾರ್ಕಿಂಗ್ ಮಾಡಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಸಾರ್ವಜನಿಕರು ಕಾರು ಚಾಲಕನ ಮೇಲೆ ಕೋಪಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ. ಸಾರ್ವಜನಿಕರು ಹಾಗೂ ಪೊಲೀಸರು ಸೇರಿ ಕಾರನ್ನು ಎತ್ತಿ ಪಕ್ಕಕ್ಕಿರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

- Advertisement -

Related news

error: Content is protected !!