

ವಿಟ್ಲ: ವೈಯಕ್ತಿಕ ವಿಚಾರದಲ್ಲಿ ಹಿಂದೂ ಸಂಘಟನೆಗಳ ಎರಡು ತಂಡಗಳ ನಡುವೆ ಸಾಲೆತ್ತೂರಿನ ಅಗರಿಯಲ್ಲಿ ಮಾರಾಮಾರಿ ನಡೆದಿತ್ತು. ಈ ಸಂಬಂಧ ಒಟ್ಟು 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ಮತ್ತೆ ಮೂವರು ಹಿಂದೂ ಸಂಘಟನೆಯ ಮುಖಂಡರನ್ನು ಬಂಧಿಸಿದ್ದಾರೆ.
ಪ್ರಶಾಂತ್ ಅಲಿಯಾಸ್ ಪಚ್ಚು ಎಂಬವನಿಗೆ ಚೂರಿ ಇರಿತ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿಗಳಾದ ಚಂದ್ರಹಾಸ್ ಕನ್ಯಾನ, ನಾಗೇಶ್ ಮತ್ತು ದೇವದಾಸ ಎಂಬವರನ್ನು ಮಡಿಕೇರಿ ಸಮೀಪದಲ್ಲಿ ವಿಟ್ಲ ಠಾಣಾ ಇನ್ಸಪೆಕ್ಟರ್ ನಾಗಾರಾಜ್ H.E ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೈಯಕ್ತಿಕ ವಿಚಾರದಲ್ಲಿ ಸಂಘಟನೆಗಳ ಎರಡು ತಂಡಗಳ ನಡುವೆ ಸಾಲೆತ್ತೂರಿನ ಅಗರಿಯಲ್ಲಿ ಮಾರಾಮಾರಿ ನಡೆದಿತ್ತು. ಈ ಬಗ್ಗೆ ಇತ್ತಂಡಗಳೂ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಟ್ಟು 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿ ನಾಲ್ವರನ್ನು ವಶಕ್ಕೆ ಪಡೆದಿದ್ದರು. ತನಿಖೆ ಮುಂದುವರಿದು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದೆ.
- SC/ST ಮೀಸಲು ಕ್ಷೇತ್ರಗಳ ಆವರ್ತನ ಕೋರಿಕೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
- ರೇಣುಕಾಸ್ವಾಮಿ ಕೊಲೆ ಪ್ರಕರಣ; ಮಾಫಿ ಸಾಕ್ಷಿ ಪ್ರದೂಶ್ಗೆ ಮಧ್ಯಂತರ ಜಾಮೀನು
- Come scegliere le applicazioni più affidabili di gaming per dispositivi mobili protette
- ಪಡಿತರ ಚೀಟಿದಾರರು ನ.10ರೊಳಗೆ ಇ-ಕೆವೈಸಿ ಮಾಡಿಸಲು ಆಹಾರ ಇಲಾಖೆ ಸೂಚನೆ
- ಚಾರ್ಮಾಡಿ ಸೇತುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ









