Sunday, June 21, 2026
spot_imgspot_img
spot_imgspot_img

ವಿದ್ಯುತ್ ಶಾಕ್ ಹೊಡೆದು ದಂಪತಿ ಹಾಗೂ ಮೊಮ್ಮಗಳು ಸ್ಥಳದಲ್ಲೇ ಸಾವು

- Advertisement -
- Advertisement -

ವಿದ್ಯುತ್ ಶಾಕ್ ಹೊಡೆದು ದಂಪತಿ ಹಾಗೂ ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟ  ಘಟನೆ ಬೆಳಗಾವಿಯ ಶಾಹುನಗರದಲ್ಲಿ ನಡೆದಿದೆ. ಪತಿ ಈರಪ್ಪ ರಾಠೋಡ(53), ಪತ್ನಿ ಶಾಂತವ್ವ ರಾಠೋಡ(45) ಮೊಮ್ಮಗಳು ಅನ್ನಪೂರ್ಣಾ ರಾಠೋಡ(13) ಮೃತ ಪಟ್ಟವರು.

ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಈರಪ್ಪ ಮೋಟರ್ ಆನ್​​ ಮಾಡಲು ಹೋಗಿದ್ದಾಗ ವಿದ್ಯುತ್​​ ಶಾಕ್​​ ಹೊಡೆದಿದೆ. ಈ ವೇಳೆ ವಿದ್ಯುತ್​ ಪ್ರವಹಿಸಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಪತಿ ಈರಪ್ಪ ರಕ್ಷಣೆಗೆ ಹೋದ ಪತ್ನಿ ಶಾಂತವ್ವ ಹಾಗೂ ಮೊಮ್ಮಗಳು ಅನ್ನಪೂರ್ಣಾಗೂ ವಿದ್ಯುತ್​ ಪ್ರವಹಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾ ನಿವಾಸಿಗಳು. ಘಟನಾ ಸ್ಥಳಕ್ಕೆ ಬೆಳಗಾವಿಯ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!