Tuesday, June 23, 2026
spot_imgspot_img
spot_imgspot_img

ಶಾಲೆಗೆಂದು ಹೊರಟ ಬಾಲಕಿ ನಿವೃತ್ತ ಮುಖ್ಯ ಶಿಕ್ಷಕರ ತೋಟದ ಬಾವಿಯಲ್ಲಿ ಶವವಾಗಿ ಪತ್ತೆ!

- Advertisement -
- Advertisement -

ರಾಮನಗರ: ಮನೆಯಿಂದ ಶಾಲೆಗೆ ಹೋಗಬೇಕಿದ್ದ ಬಾಲಕಿ ನಿವೃತ್ತ ಮುಖ್ಯ ಶಿಕ್ಷಕರೊಬ್ಬರ ತೋಟದ ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ರಾಮನಗರ ಜಿಲ್ಲೆ ಮಾಗಡಿಯಲ್ಲಿ ನಡೆದಿದೆ.

ಮೃತ ಬಾಲಕಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಟ್ಟಮೇಗಲಪಾಳ್ಯದ ಯಶೋದಮ್ಮ ಎಂಬುವರ ಪುತ್ರಿ ಲಕ್ಷ್ಮೀ (14) ಎನ್ನಲಾಗಿದೆ. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಲಕ್ಷ್ಮೀ, ಸೋಮವಾರ ಬೆಳಗ್ಗೆ ಮನೆಯಿಂದ ಶಾಲೆಗೆ ಹೋದವಳು ಮನೆಗೆ ವಾಪಸಾಗಿರಲಿಲ್ಲ.

ಗಾಬರಿಗೊಂಡ ತಾಯಿ ಯಶೋದಮ್ಮ, ಮಗಳಿಗಾಗಿ ಗ್ರಾಮದಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ. ಬಳಿಕ ಮಾಗಡಿ ಠಾಣೆಗೆ ದೂರು ನೀಡಿದ್ದರು. ಮಧ್ಯಾಹ್ನ ವೇಳೆಗೆ ದೊಣಕುಪ್ಪೆ ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ಗಂಗರಾಯಿ ಎಂಬುವವರ ತೋಟದಲ್ಲಿರುವ ಬಾವಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ.

ಇದರಿಂದ ಸಾಕಷ್ಟು ಅನುಮಾನಗಳು ಹುಟ್ತಿಕೊಂಡಿದ್ದು, ನಾಗೇಶ ಎಂಬಾತನ ಮೇಲೆ ಅನುಮಾನ ವ್ಯಕ್ತಪಡಿಸಿ ಯಶೋದಮ್ಮ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!