Saturday, June 27, 2026
spot_imgspot_img
spot_imgspot_img

ಸವಣೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನಾ ಪೋಸ್ಟ್ ಹಾಕಿದ ಪ್ರಕರಣ; ಯುವಕನ ಬಂಧನ

- Advertisement -
- Advertisement -

ಸವಣೂರು: ಕಡಬ ತಾಲೂಕಿನ ಸವಣೂರು ಗ್ರಾಮದ ಯುವಕನೋರ್ವ ವಾಟ್ಸಾಪ್ ಸ್ಟೇಟಸ್ ನಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್ನ್ನು ಹಾಕಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಸವಣೂರಿನ ನಿಝಾರ್ ಎಂಬ ಯುವಕ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಕೋಮು ಪ್ರಚೋದನಕಾರಿ ಬರಹವನ್ನು ಹಾಕಿದ್ದು ಈ ಬಗ್ಗೆ ಸವಣೂರು ಹಿಂದೂ ಜಾಗರಣ ವೇದಿಕೆ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿ, ಕಡಬ ದಂಡಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದಾರೆ.

ಬಳಿಕ ಬಾಂಡ್ ಮುಚ್ಚಳಿಕೆ ಮುಖಾಂತರ ದಂಡಾಧಿಕಾರಿಯವರು ಬಿಡುಗಡೆಗೊಳಿಸಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!