Sunday, May 19, 2024
spot_imgspot_img
spot_imgspot_img

ಸಿ.ಟಿ ರವಿ ಕ್ಷೇತ್ರದಲ್ಲಿ ಬುಲ್ಡೋಜರ್ ಸದ್ದು: ಅಕ್ರಮ ಕಸಾಯಿಖಾನೆ ಮೇಲೆ ದಾಳಿ

- Advertisement -G L Acharya panikkar
- Advertisement -

ಚಿಕ್ಕಮಗಳೂರು: ಕಾಫಿನಾಡಲ್ಲಿ ಉತ್ತರ ಪ್ರದೇಶದ ಬುಲ್ಡೋಜರ್ ಪ್ರಯೋಗ ಮಾಡಲಾಗುತ್ತಿದೆ. ಅಕ್ರಮ ಗೋ ಮಾಂಸ ಅಡ್ಡೆಗಳ ಮೇಲೆ ನಗರ ಸಭೆ ಜೆಸಿಬಿ ಯಂತ್ರದ ಮೂಲಕ ದಾಳಿ ನಡೆಸಲು ಪ್ಲಾನ್ ರೂಪಿಸಿ ಅಖಾಡಕ್ಕೆ ಇಳಿದಿದೆ.

ಚಿಕ್ಕಮಗಳೂರು ನಗರಸಭೆಯಿಂದ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ಮಾಡಲು ಪ್ಲಾನ್ ರೂಪಿಸಿತ್ತು. ಚಿಕ್ಕಮಗಳೂರು ನಗರದಲ್ಲಿ ಒಂದೇ ಒಂದು ಕಸಾಯಿಖಾನೆಗೂ ಅನುಮತಿ ಇಲ್ಲ. ಆದ್ರೆ, ಅಕ್ರಮವಾಗಿ 40ಕ್ಕೂ ಹೆಚ್ಚಿವೆ. ಆಗಾಗ ನೋಟೀಸ್ ನೀಡಿದ್ದರು ಅಕ್ರಮ ಗೋಹತ್ಯೆ ನಿಂತಿರಲಿಲ್ಲ. ಪ್ರಾಥಮಿಕ ಹಂತವಾಗಿ 20ಕ್ಕೂ ಹೆಚ್ಚು ಮನೆಗಳಿಗೆ ನಗರಸಭೆ ನೋಟೀಸ್ ನೀಡಿ ಎಚ್ಚರಿಕೆ ನೀಡಿದೆ. ಅಕ್ರಮ ಗೋಹತ್ಯೆ ನಡೆದರೆ ಆ ಜಾಗ ಮನೆ-ಕಟ್ಟಡ ಯಾವುದೇ ಆಗಿದ್ರು ಮುಲಾಜಿಲ್ಲದೆ ಡೆಮಾಲಿಶ್ ಮಾಡ್ತೀವಿ ಅಂತ ನಗರಸಭೆ ಸಭಾ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ ಎಚ್ವರಿಕೆ ನೀಡಿದ್ದಾರೆ.

ಎಂಟು ದಿನಗಳ ಹಿಂದಷ್ಟೆ ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯಲ್ಲಿ ಗಿಡ ಗಂಟೆಗಳ ಮಧ್ಯೆ ಇದ್ದ ಅಕ್ರಮ ಕಸಾಯಿಖಾನೆಯನ್ನ ತೆರವು ಮಾಡಿದ್ದರು. ಅಲ್ಲೂ ಕೂಡ ಎಳೆ ಕರುವನ್ನ ಕಡಿದು ನೇತು ಹಾಕಿದ್ದರು. ಅಲ್ಲಿದ್ದ ಸುಮಾರು 200 ಕೆಜಿಗೂ ಅಧಿಕ ಮಾಂಸವನ್ನ ವಶಪಡಿಸಿಕೊಂಡಿದ್ದರು. ನಿನ್ನೆಯೂ ನಗರದ ಟಿಪ್ಪು ನಗರದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ಮಾಡಿ ಅಲ್ಲಿ ಪ್ಯಾಕ್ ಆಗಿದ್ದ ಹಾಗೂ ಫ್ರಿಜ್ ನಲ್ಲಿ ಇಟ್ಟಿದ್ದ ಮಾಂಸದ ಜೊತೆ ಕೆಲ ಸಾಮಾಗ್ರಿಗಳನ್ನೂ ವಶಕ್ಕೆ ಪಡೆದಿದ್ದಾರೆ. ಮನೆಯನ್ನೇ ಕಸಾಯಿಖಾನೆ ಮಾಡಿಕೊಂಡವರಿಗೆ ಕಠಿಣವಾಗಿ ಎಚ್ವರಿಸಿದ್ದಾರೆ.

ಅಕ್ರಮ ಕಟ್ಟಡಗಳನ್ನ ಎರಡು-ಮೂರು ದಿನದಲ್ಲಿ ತೆರವು ಮಾಡದಿದ್ರೆ ನಗರಸಭೆಯೇ ತೆರವು ಮಾಡಲಿದೆ ಎಂದು ಎಚ್ವರಿಕೆ ನೀಡಿದ್ದಾರೆ. ಒಟ್ಟಾರೆ, ಹಲವು ದಶಕಗಳಿಂದ ರಾಜರೋಷವಾಗಿ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಖದೀಮರಿಗೆ ಆಡಳಿತ ವ್ಯವಸ್ಥೆ ನಡುಕ ಹುಟ್ಟಿಸಿದೆ.

- Advertisement -

Related news

error: Content is protected !!