- Advertisement -
- Advertisement -


ಸುಬ್ರಹ್ಮಣ್ಯ : ಕಾರಿನಲ್ಲಿ ಬಂದ ಅಪರಿಚಿತರು ದನವನ್ನು ಕದಿಯಲು ಪ್ರಯತ್ನ ಮಾಡಿದ ಘಟನೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ದಿನಾಂಕ 23.03.2022 ನಡೆದಿದ್ದು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್ ಫಾರೂಕ್ ಎಂಬಾತನನ್ನು ಸುಬ್ರಹ್ಮಣ್ಯ ಪೋಲೀಸರು ಬಂಧಿಸಿದ್ದಾರೆ. ಮಾನ್ಯ ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ನೀಡಿದ್ದು, ಉಳಿದ 3 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಪಾರ್ಕಿಂಗ್ ಜಾಗದಿಂದ, ಆಂಜನೇಯ ಗುಡಿಯ ಹಿಂಬಾಗದಲ್ಲಿ ಮಲಗಿದ್ದ ದನವನ್ನು ಕಳ್ಳರು ಕದ್ದು ಇನ್ನೋವ ಕಾರಿನಲ್ಲಿ ತುಂಬಿಸಿ ಕದ್ದೊಯ್ಯಲು ಯತ್ನಿಸಿದ ಘಟನೆ ಮಾ.24 ರಂದು ರಾತ್ರಿ ನಡೆದಿದ್ದು, ಈ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.


- Advertisement -