
ಸ್ವತಂತ್ರ ಮಹೋತ್ಸವದ ಪ್ರಯುಕ್ತವಾಗಿ ಇಂದು ಹಿಂದೂ ಜಾಗರಣ ವೇದಿಕೆ ದುರ್ಗಾ ಘಟಕ ಪದವಿನಂಗಡಿ ಇದರ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಯುಕ್ತ ಸದಸ್ಯರೆಲ್ಲರೂ ಪದವಿನಂಗಡಿ ಜಂಕ್ಷನ್ ಹಿಂದೂ ಜಾಗರಣ ವೇದಿಕೆಯ ದುರ್ಗಾ ಘಟಕ ಪದವಿನಂಗಡಿ ಬಳಿಯಿಂದ ಬೋಂದೆಲ್ ಮಾರ್ಗವಾಗಿ ಪಚ್ಚನಾಡಿ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ವೃಕ್ಷ ಜಾಗರಣೆಯ ಅಂಗವಾಗಿ ಗಿಡನೆಡುವ ಕಾರ್ಯಕ್ರಮ ಏರ್ಪಡಿಸಲಾಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಶ್ರೀಯುತ ಚೇತನ್ ನಿರೂಪಕರು ದೈಜಿವರ್ಲ್ಡ್, ಮೋಹನ್ ಪಚ್ಚನಾಡಿ , ಅಕ್ಷಯ್ ಪದವಿನಂಗಡಿ, ಶರತ್ ಪದವಿನಂಗಡಿ, ನಟರಾಜ್ ಪಚ್ಚನಾಡಿ, ದುರ್ಘ ಘಟಕದ ಅಧ್ಯಕ್ಷರಾದ ಶ್ರೀ ಸುನಿಲ್ ಹಾಗು ಪ್ರಮುಖರಾದ ಸುಧಾಕರ್ ಶೆಟ್ಟಿ, ಗಿರೀಶ್, ವಿಕ್ರಂ ಜಯಪ್ರಕಾಶ್, ದೀಪಕ್ ಪದವಿನಂಗಡಿ , ಉದಯ್ ಗಂಧಕಾಡು, ಅಖಿಲ್ ಕೃಷ್ಣಾನಂದ, ಸನಿಲ್ ಹಾರ್ದಿಕ್ ಫ್ರೆಂಡ್ಸ್ ಪಚ್ಚನಾಡಿ, ಶ್ರೀ ದೇವಿ ಫ್ರೆಂಡ್ಸ್ ಹಾಗು ಗೆಳೆಯರ ಬಳಗ ಸದಸ್ಯರು ಹಾಜರಿದ್ದರು .

ಶ್ರೀ ಚೇತನ್ ಕುಮಾರ್ ನಿಸರ್ಗದ ಮಹತ್ವ ಹಾಗು ನಮ್ಮ ಕರ್ತವ್ಯವನ್ನು ತಿಳಿ ಹೇಳಿ ಜಾಗ್ರತಿ ಮೂಡಿಸಿದರು.













