Monday, July 7, 2025
spot_imgspot_img
spot_imgspot_img

ಅರಿಶಿನ ನೀರಿನ ಆರೋಗ್ಯಕರ ಪ್ರಯೋಜನಗಳು

- Advertisement -
- Advertisement -

ಅರಿಶಿನವನ್ನು ಭಾರತೀಯ ಆಹಾರದಲ್ಲಿ (Food) ಯಾವಾಗಲೂ ಬಳಸುತ್ತಾರೆ. ಬೆಳಿಗ್ಗೆ ಮಾಡುವ ಉಪಾಹಾರದಿಂದ ಹಿಡಿದು ರಾತ್ರಿ ಮಾಡಿಕೊಳ್ಳುವ ಪಲ್ಯ ಮತ್ತು ಸಾರಿನಲ್ಲೂ ಸಹ ಅರಿಶಿನವನ್ನು ಬಳಸುತ್ತಾರೆ ಎಂದು ಹೇಳಬಹುದು. ಇದು ಬರೀ ಅಡುಗೆಗಷ್ಟೇ ಅಲ್ಲದೆ, ಚರ್ಮದ ಆರೈಕೆಯಲ್ಲಿಯೂ ಸಹ ತುಂಬಾನೇ ಉಪಯೋಗಕಾರಿಯಾಗಿದೆ. ಇದು ಉತ್ಕರ್ಷಣ ನಿರೋಧಕ, ಉರಿಯೂತ ಶಮನಕಾರಿ ಮತ್ತು ವಿಟಮಿನ್ ಸಿ ಅಂಶದಿಂದ ಕೂಡಿರುತ್ತದೆ. ಸಾಂಪ್ರದಾಯಿಕ ಭಾರತೀಯ ಆಯುರ್ವೇದ ಔಷಧಿಯಲ್ಲಿ, ಇದನ್ನು ಚರ್ಮದ ಅಸ್ವಸ್ಥತೆಗಳು, ಅಲರ್ಜಿಗಳು ಮತ್ತು ಕೀಲು ಅಸ್ವಸ್ಥತೆಯಂತಹ ಕಾಯಿಲೆಗಳನ್ನು ಗುಣಪಡಿಸಲು ದೀರ್ಘಕಾಲದಿಂದ ಬಳಸಲಾಗುತ್ತಿದೆ. ವಾಸ್ತವವಾಗಿ, ನೀವು ಯಾವುದಾದರೂ ಡಿಟಾಕ್ಸ್ ಅನ್ನು ಹುಡುಕುತ್ತಿದ್ದರೆ, ಅರಿಶಿನ ನೀರನ್ನು ಬಳಸಿ, ಇದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಫಿಸಿಕೋ ಡಯಟ್ ಕ್ಲಿನಿಕ್ ನ ಡಯಟೀಷಿಯನ್ ವಿಧಿ ಚಾವ್ಲಾ ಅವರು ಹೆಲ್ತ್ ಶಾಟ್ಸ್ ನೊಂದಿಗೆ ಮಾತನಾಡಿ, ನಿಯಮಿತವಾಗಿ ಅರಿಶಿನ ನೀರನ್ನು ಕುಡಿಯುವುದರಿಂದ ಆಗುವ ಆರೋಗ್ಯಕರವಾದ ಪ್ರಯೋಜನಗಳನ್ನು ಇಲ್ಲಿ ತಿಳಿಸಿದ್ದಾರೆ ನೋಡಿ. “ಅರಿಶಿನವು ಔಷಧೀಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಅನೇಕ ರೋಗಗಳ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ, ಅರಿಶಿನ ನೀರು ನೈಸರ್ಗಿಕ ಡಿಟಾಕ್ಸ್ ಆಗಿ ಕೆಲಸ ಮಾಡುತ್ತದೆ, ಇದು ನಿಮ್ಮ ದೇಹದಲ್ಲಿರುವ ವಿಷವನ್ನು ತೊಡೆದು ಹಾಕಲು ಮತ್ತು ದೇಹವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ” ಎಂದು ಚಾವ್ಲಾ ಹೇಳುತ್ತಾರೆ.

ಅರಿಶಿನ ನೀರು ತೂಕ ಇಳಿಸಿಕೊಳ್ಳಲು ಸಹಾಯ ಮಾಡಬಹುದೇ?

ಅರಿಶಿನ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೂ ಸಹ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ, ಏಕೆಂದರೆ ಇದು ಬಲವಾದ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. 2015 ರ ಯುರೋಪಿಯನ್ ರಿವ್ಯೂ ಫಾರ್ ಮೆಡಿಕಲ್ ಅಂಡ್ ಫಾರ್ಮಾಕೋಲಾಜಿಕಲ್ ಸೈನ್ಸ್ ಎಂಬ ಅಧ್ಯಯನವು, ಕಟ್ಟುನಿಟ್ಟಾದ ಆಹಾರದೊಂದಿಗೆ 95 ಪ್ರತಿಶತ ಕರ್ಕ್ಯುಮಿನ್ ಅನ್ನು ಒಳಗೊಂಡ 800 ಮಿಲಿ ಗ್ರಾಂ ಪೂರಕವನ್ನು ತೆಗೆದುಕೊಂಡ ಅಧಿಕ ತೂಕದ ವಯಸ್ಕರು ಮೊದಲ 30 ದಿನಗಳಲ್ಲಿ 2 ಪ್ರತಿಶತದಷ್ಟು ಬಾಡಿ ಮಾಸ್ ಇಂಡೆಕ್ಸ್ ಬದಲಾವಣೆಗಳನ್ನು ಕಂಡರು, ಇದು 60 ದಿನಗಳ ನಂತರ 5 ರಿಂದ 6 ಪ್ರತಿಶತಕ್ಕೆ ಏರಿತು. ಇದು ದೇಹದ ಶೇಕಡಾ 8 ಕ್ಕಿಂತ ಹೆಚ್ಚು ಕೊಬ್ಬಿನ ನಷ್ಟಕ್ಕೆ ಸಮನಾಗಿದೆ.

ಅರಿಶಿನ ನೀರಿನ ಇತರ 6 ಆರೋಗ್ಯ ಪ್ರಯೋಜನಗಳು ಇಲ್ಲಿವೆ:

  1. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಅರಿಶಿನವು ಪಿತ್ತಕೋಶ ಮತ್ತು ಇತರ ಜೀರ್ಣಕಾರಿ ಕಿಣ್ವಗಳಲ್ಲಿ ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎಂದು ತಿಳಿದು ಬಂದಿದೆ. ಅರಿಶಿನವು ಹೊಟ್ಟೆಯುಬ್ಬರಿಕೆಯ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೃಢವಾದ ಚಯಾಪಚಯ ವ್ಯವಸ್ಥೆಯು ತೂಕ ನಷ್ಟಕ್ಕೂ ಸಹ ಸಹಾಯ ಮಾಡುತ್ತದೆ.

  1. ಹೃದ್ರೋಗಗಳನ್ನು ತಡೆಗಟ್ಟುತ್ತದೆ

“ಹೆಚ್ಚಾಗಿ, ಹೃದಯದ ಕಾಯಿಲೆಗಳು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದರಿಂದ ಉಂಟಾಗುತ್ತವೆ. ಅರಿಶಿನವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತನಾಳಗಳ ಒಳಪದರವನ್ನು ಸುಧಾರಿಸುತ್ತದೆ” ಎಂದು ಚಾವ್ಲಾ ಹೇಳುತ್ತಾರೆ. ಇದು ರಕ್ತದೊತ್ತಡ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

  1. ಅಲ್ಝೈಮರ್ ಕಾಯಿಲೆಯನ್ನು ತಡೆಗಟ್ಟುತ್ತದೆ

ವೈದ್ಯಕೀಯ ವಿಜ್ಞಾನವು ಇನ್ನೂ ಅಲ್ಝೈಮರ್ ಕಾಯಿಲೆಗೆ ಪರಿಹಾರವನ್ನು ಕಂಡು ಕೊಂಡಿಲ್ಲ, ಇದು ಸಂಭವಿಸದಂತೆ ತಡೆಯುವುದು ಅತ್ಯಗತ್ಯವಾಗಿದೆ. ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ, ಇದು ಉರಿಯೂತ ಮತ್ತು ಆಕ್ಸಿಡೇಟಿವ್ ಹಾನಿಗೆ ಸಹಾಯ ಮಾಡುತ್ತದೆ, ಆ ಮೂಲಕ ಅಲ್ಝೈಮರ್ ಉಂಟಾಗದಂತೆ ಸಹಾಯ ಮಾಡುತ್ತದೆ.

  1. ಉರಿಯೂತವನ್ನು ಕಡಿಮೆ ಮಾಡುತ್ತದೆ

ರಾತ್ರಿ ಹೊತ್ತಿನಲ್ಲಿ ಮಲಗುವ ಮುಂಚೆ ಒಂದು ಬೆಚ್ಚಗಿನ ಲೋಟ ಅರಿಶಿನದ ನೀರು ಕುಡಿದು ಮಲಗಿದರೆ, ನಿಮ್ಮ ದೇಹವು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. “ಅರಿಶಿನದ ಉರಿಯೂತ ಶಮನಕಾರಿ ಗುಣಲಕ್ಷಣಗಳು ಸಂಧಿವಾತ ಮತ್ತು ದೀರ್ಘಕಾಲದ ಉರಿಯೂತದ ಅಸ್ವಸ್ಥತೆಯ ರೋಗಲಕ್ಷಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ” ಎಂದು ವಿಧಿ ಹೇಳುತ್ತಾರೆ. ಅರಿಶಿನದ ನೀರು ವೃದ್ಧರ ಕೀಲುಗಳಲ್ಲಿನ ನೋವನ್ನು ಸಹ ಕಡಿಮೆ ಮಾಡುತ್ತದೆ.

  1. ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ

ಅರಿಶಿನವು ರಕ್ತವನ್ನು ಶುದ್ಧೀಕರಿಸುತ್ತದೆ ಎಂದು ತಿಳಿದು ಬಂದಿದೆ, ಏಕೆಂದರೆ ಇದು ವಿಷವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶಗಳಿಗೆ ಹಾನಿಯಿಂದ ಸಹಾಯ ಮಾಡುತ್ತವೆ, ಚರ್ಮದ ಟೋನ್ ಅನ್ನು ಪ್ರಕಾಶಮಾನಗೊಳಿಸುತ್ತವೆ ಮತ್ತು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಅರಿಶಿನದ ನೀರು ಚರ್ಮವನ್ನು ಹೆಚ್ಚು ಕಾಂತಿಯುತ ಮತ್ತು ಆರೋಗ್ಯಕರವಾಗಿಸುತ್ತದೆ.

  1. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕೊನೆಯದಾಗಿ, ಅರಿಶಿನದ ನೀರು ದೃಢವಾದ ರೋಗನಿರೋಧಕ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಅರಿಶಿನವು ಉತ್ಕರ್ಷಣ ನಿರೋಧಕಗಳು, ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ರೋಗನಿರೋಧಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ.

ಅರಿಶಿನ ನೀರನ್ನು ಯಾವಾಗ ಸೇವಿಸಬೇಕು?

ಅರಿಶಿನವು ನಮ್ಮ ದೇಹದಲ್ಲಿನ ಅನೇಕ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಕಂಡು ಬಂದಿದೆ. “ನಿಮ್ಮ ಊಟಕ್ಕೆ ಒಂದು ಟೀ ಸ್ಪೂನ್ ಅರಿಶಿನ ಪುಡಿಯನ್ನು ಸೇರಿಸುವುದನ್ನು ಹೊರತುಪಡಿಸಿ, ಹೆಚ್ಚುವರಿ ಪ್ರಯೋಜನಗಳಿಗಾಗಿ ನೀವು ಪ್ರತಿದಿನ ಅರಿಶಿನ ನೀರನ್ನು ಸೇವಿಸಬಹುದು. ಬೆಳಗಿನ ಉಪಾಹಾರಕ್ಕೆ ಮೊದಲು ಅಥವಾ ರಾತ್ರಿ ಮಲಗುವ ಮೊದಲು ನೀವು ಒಂದು ಲೋಟ ಬೆಚ್ಚಗಿನ ಅರಿಶಿನದ ನೀರನ್ನು ಕುಡಿಯಬಹುದು.

- Advertisement -

Related news

error: Content is protected !!