

ಉತ್ತರ ಪ್ರದೇಶ: ಮಕ್ಕಳು ತುಂಟಾಟ ಮಾಡಿದ್ರೆ ತುಂಬಾ ಚೆನ್ನಾಗಿರುತ್ತೆ. ಅವ್ರ ಕೀಟ್ಲೆಗಳನ್ನ ನೋಡ್ತಾ, ಅವ್ರನ್ನ ಮುದ್ದಾಡ್ಬೇಕು ಅನ್ಸುತ್ತೆ. ಆದ್ರೆ, ಕೆಲವು ಮಕ್ಕಳು ಆ ಕೀಟ್ಲೆ, ತುಂಟಾಟದಲ್ಲೇ ಏನೋ ಒಂದು ಅನಾಹುತವನ್ನ ಮಾಡಿಕೊಂಡ್ ಬಿಟ್ಟಿರುತ್ತೆ. ಇದೀಗ, ಒಂದೂವರೆ ವರ್ಷದ ಗಂಡು ಮಗು ಕುಕ್ಕರ್ನಲ್ಲಿ ಆಟ ಆಡ್ಬೇಕಾದ್ರೆ ತಲೆಯನ್ನ ಆ ಕುಕ್ಕರ್ ಒಳಗೆ ಹಾಕೊಂಡ್ಬಿಟ್ಟಿದೆ.
ಹೌದು, ಉತ್ತರ ಪ್ರದೇಶದ ಅಗ್ರಾದಲ್ಲಿ ಚಿಕ್ಕ ಬಾಲಕನೊಬ್ಬ, ತನ್ನ ಮಾವನ ಮನೆಯಲ್ಲಿ ಆಟ ಆಡಿಕೊಂಡಿದ್ದ, ಈ ವೇಳೆ, ಕುಕ್ಕ್ರ್ನೊಳಗೆ ತನ್ನ ತಲೆಯನ್ನ ಹಾಕಿ, ಹೊರಗೆ ಬರೋದಕ್ಕೆ ಆಗ್ದೇ ಒದ್ದಾಡಿದ್ದಾನೆ. ತಕ್ಷಣ, ಮಗುವಿನ ಮನೆಯವರೇ ಬಾಲಕನ ತಲೆಯಿಂದ ಕುಕ್ಕರ್ನ್ನು ಹೊರಗೆ ತೆಗೆಯಲು ಪ್ರಯತ್ನಿಸಿದ್ದಾರೆ. ಆದ್ರೆ, ಸಾಧ್ಯವಾಗಿಲ್ಲ, ಹತ್ತಿರದ ಎಸ್ ಎಂ ಚಾರಿಟಬಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈದ್ಯರು ಸತತ ಎರಡು ಗಂಟೆಗಳ ಕಾಲಾವಕಾಶ ತೆಗೆದುಕೊಂಡು ಮಗುವನ್ನ ರಕ್ಷಿಸಿದ್ದಾರೆ.
ಡಾ. ಫರ್ಹತ್ ಖಾನ್ ಹಾಗೂ ಅವ್ರ ತಂಡ ಮಗು ತಲೆ ಸಿಕ್ಕಿಹಾಕೊಂಡಿದ್ದ ಕುಕ್ಕರ್ನ ಗ್ರೈಂಡಿಂಗ್ ಮಷಿನ್ ಮೂಲಕ ನಿಧಾನವಾಗಿ, ಮಗುವಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕುಕ್ಕರ್ನ ಸೀಳಿ ಮಗುವಿನ ತಲೆಯಿಂದ ಕುಕ್ಕರ್ನ್ನು ಹೊರಗೆ ತೆಗೆದಿದ್ದಾರೆ. ಸದ್ಯ, ಮಗು ಹುಷಾರಾಗಿದ್ದು, ಎಂದಿನಂತೆ ಆಟವಾಡಿಕೊಂಡಿದೆ ಅಂತ ಕುಟುಂಬಸ್ಥರು ತಿಳಿಸಿದ್ದಾರೆ.













