- Advertisement -
- Advertisement -


ವಿಟ್ಲ: ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಜೂಡೋ ಪಂದ್ಯಾಟದಲ್ಲಿ ವಿಟ್ಲದ ಪ್ರತಿಭೆ ಧನ್ವಿ ಸಣ್ಣಗುತ್ತು -63 ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಇವರು ವಿಟ್ಲದ ಜೆ.ಸಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನೋಟರಿ ವಕೀಲರು ಹಾಗೂ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಮತ್ತು ಶ್ವೇತಾ ದಂಪತಿಯ ಪುತ್ರಿ.
ಮಾಧವ ಅಳಿಕೆ ಇವರ ಮಾರ್ಗದರ್ಶನದಲ್ಲಿ ರೋಹಿತ್ ಎಸ್.ಎನ್, ನಿಖಿಲ್ ಕೆ.ಟಿ, ತನುಶ್ರೀ ಡಿ ಬಂಗೆರ, ಭವಿಶ್ ಸಿಂಹಮೂಲೆ, ಸುಧೀನ್ ಆಚಾರ್ ತರಬೇತಿ ನೀಡಿದ್ದಾರೆ.
- Advertisement -








