Saturday, October 10, 2026
spot_imgspot_img
spot_imgspot_img

ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಕುಮಿಟೆ ವಿಭಾಗದಲ್ಲಿ ಮಂಗಳೂರಿನ ಆಯುಷ್ ಆರ್ ಕೆ. ನಾಯರ್ ಗೆ ಪ್ರಥಮ ಸ್ಥಾನ

- Advertisement -
- Advertisement -

ಇತ್ತೀಚೆಗೆ ಪುಣೆಯ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ 12.13 ರ ವಯೋಮಾನದ 50 ಕೆ. ಜಿ ದೇಹ ತೂಕದ ಅಂತರಾಷ್ಟ್ರೀಯ ಮಟ್ಟದ ಗೋಜುರಿಯೋ ಕರಾಟೆ ಚಾಂಪಿಯನ್ ಶಿಪ್ ನ ಕುಮಿಟೆ ವಿಭಾಗದಲ್ಲಿ ಕುಳಾಯಿಯ ಆಯುಷ್ ಆರ್ ಕೆ ನಾಯರ್ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಅತ್ಯಂತ ರೋಮಾಂಚನಕಾರಿಯಾಗಿ ನಡೆದ ಈ ಫೈನಲ್ ಪಂದ್ಯದಲ್ಲಿ ಇವರು ತಮ್ಮ ಎದುರಾಳಿಯನ್ನು ಅದ್ಭುತ ತಂತ್ರಗಾರಿಕೆ ಹಾಗೂ ಚುರುಕಿನ ಚಲನ ವಲನಗಳ ಮೂಲಕ ಪರಾಭವಗೊಳಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.

ಇವರು ಕುಳಾಯಿಯ ರಾಕೇಶ್ ಹಾಗೂ ಸಂಧ್ಯಾ ರಾಕೇಶ್ ದಂಪತಿಗಳ ಪುತ್ರನಾಗಿದ್ದು, ಸುರತ್ಕಲ್ ನ ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕುಳಾಯಿಯ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಮಂದಿರದಲ್ಲಿ ಕರಾಟೆ ಮುಖ್ಯ ಶಿಕ್ಷಕ ಶರತ್ ಕರಿಕಟ್ಟ ಹಾಗೂ ಸೆನ್ಸಾಯಿ ವಿಕಾಸ್ ಎಸ್ ಕುಮಾರ್ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ.

- Advertisement -

Related news

error: Content is protected !!