Saturday, July 25, 2026
spot_imgspot_img
spot_imgspot_img

ಆನ್‌ಲೈನ್ ಆರ್‌ಟಿಐ ಪೋರ್ಟಲ್ ಪ್ರಾರಂಭಿಸಿದ ಸುಪ್ರೀಂಕೋರ್ಟ್

- Advertisement -
- Advertisement -

ಸುಪ್ರೀಂಕೋರ್ಟ್‌ಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ (RTI Act) ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರು ಬಳಸಬಹುದಾದ ಆನ್‌ಲೈನ್ ಪೋರ್ಟಲ್ ಅನ್ನು ಸುಪ್ರೀಂಕೋರ್ಟ್ ಮಂಗಳವಾರ ಪ್ರಾರಂಭಿಸಿದೆ. registry.sci.gov.in/rti_app ಎಂಬ ಪೋರ್ಟಲ್ ಭಾರತೀಯ ನಾಗರಿಕರು ಆರ್‌ಟಿಐ ಅರ್ಜಿ ಸಲ್ಲಿಸಲು, ಮೊದಲ ಮನವಿ ಸಲ್ಲಿಸಲು ಮತ್ತು ಆರ್‌ಟಿಐ ಕಾಯ್ದೆಯಡಿ ಶುಲ್ಕಗಳು, ಇತರ ಶುಲ್ಕಗಳು ಇತ್ಯಾದಿಗಳಿಗೆ ಪಾವತಿ ಮಾಡಲು ಮಾತ್ರ ಬಳಸಬಹುದು.

ಅರ್ಜಿದಾರರು ನಿಗದಿತ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್, ಮಾಸ್ಟರ್/ವೀಸಾ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯುಪಿಐನ ಮೂಲಕ ಪಾವತಿಸಬಹುದು.ಆರ್‌ಟಿಐ ಅರ್ಜಿ ಸಲ್ಲಿಸಲು ಪ್ರತಿ ಅರ್ಜಿಗೆ ಶುಲ್ಕ ₹10.

ಪೋರ್ಟಲ್ ಪ್ರಾರಂಭವಾಗುವವರೆಗೆ ಸುಪ್ರೀಂಕೋರ್ಟ್‌ಗೆ ಆರ್‌ಟಿಐ ಅರ್ಜಿಗಳನ್ನು ನೇರವಾಗಿ ಪೋಸ್ಟ್ ಆಫೀಸ್ ಮೂಲಕ ಸಲ್ಲಿಸಬೇಕಾಗಿತ್ತು. ಆನ್‌ಲೈನ್ ಆರ್‌ಟಿಐ ಪೋರ್ಟಲ್‌ಗಾಗಿ ಸುಪ್ರೀಂಕೋರ್ಟ್‌ಗೆ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು.

- Advertisement -

Related news

error: Content is protected !!