- Advertisement -
- Advertisement -


ಬೆಂಗಳೂರು: ಆಸಿಡ್ ದಾಳಿಗೆ ಒಳಗಾಗಿದ್ದ ಯುವತಿಗೆ ಬೆಂಗಳೂರಿನ ಐವರು ಪೊಲೀಸರು ರಕ್ತದಾನ ಮಾಡಿದ್ದಾರೆ. ಏಪ್ರಿಲ್ 28ರಂದು ಕಾಮಾಕ್ಷಿಪಾಳ್ಯದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿ ಮೇಲೆ ನಾಗೇಶ್ ಅಲಿಯಾಸ್ ನಾಗ ಎಂಬಾತ ದಾಳಿ ನಡೆಸಿದ್ದನು.
ಆಸಿಡ್ ದಾಳಿಗೆ ಒಳಗಾಗಿದ್ದಂತೆ ಸಂತ್ರಸ್ತೆಗೆ ಮೂರು ಸರ್ಜರಿ ನಡೆದಿದ್ದು, ಈ ವೇಳೆ ರಕ್ತದಾನ ಮಾಡಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಎಂ.ಪ್ರಶಾಂತ್, ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರ್ ವಿಶ್ವನಾಥ್ ರೆಡ್ಡಿ, ಚಂದ್ರಯ್ಯ, ಮೋಹನ್ ಕುಮಾರ್ ಮತ್ತು ನಟರಾಜ್ ಅವರು ರಕ್ತದಾನ ಮಾಡಿದ್ದಾರೆ. ಒಟ್ಟು ಐದು ಯುನಿಟ್ ರಕ್ತದಾನ ಮಾಡಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.
ಇನ್ನೂ ಪೊಲೀಸರು ರಕ್ತದಾನ ಮಾಡಿರೋದಕ್ಕೆ ಸೇಂಟ್ ಜಾನ್ಸ್ ಆಸ್ಪತ್ರೆ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವತಿಗೆ ಇದುವರೆಗೂ ಮೂರು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
- 12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣಕ್ಕೆ ತೀರ್ಪು: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
- ವಿಟ್ಲ: ಬಹರೈನ್ನಿಂದ ಊರಿಗೆ ಬಂದಿದ್ದ ದಿವಾಕರ ಶೆಟ್ಟಿ ಕ್ರಿಕೆಟ್ ಆಡಿದ ಬೆನ್ನಲ್ಲೇ ಹೃದಯಾಘಾತದಿಂದ ನಿಧನ
- ಮಂಗಳೂರು ಮನಪಾ ನೂತನ ಆಯುಕ್ತ ರಾಹುಲ್ ರತ್ನಂ ಪಾಂಡೆ ಅಧಿಕಾರ ಸ್ವೀಕಾರ
- ಪುತ್ತೂರು ರಾಜಕೀಯದಲ್ಲಿ ಅಚ್ಚರಿಯ ಹೇಳಿಕೆ
- ಕರ್ನಾಟಕದ ಅತೀ ದೊಡ್ಡ ಸ್ಟೇಜ್ ರಿಯಾಲಿಟಿ ಶೋ Zee Kannada ಸರಿಗಮಪ ಲಿಟಲ್ ಚಾಂಪ್ಸ್ -2026 ರಲ್ಲಿ ಮಿಂಚುತ್ತಿರುವ ಮಂಗಳೂರಿನ ಲಿಟಲ್ ವಯಲಿನ್ ಚಾಂಪ್ಸ್ ಅಶ್ಮಿತ್


- Advertisement -








