Monday, August 10, 2026
spot_imgspot_img
spot_imgspot_img

ಉಗ್ರರೆಂದು ಭಾವಿಸಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ಸೇನೆ: ಇಬ್ಬರು ಸಾವು

- Advertisement -
- Advertisement -

ತಿರಾಪ್: ನಾಗರಿಕರನ್ನು ಉಗ್ರರೆಂದು ತಪ್ಪಾಗಿ ಭಾವಿಸಿ ಸೇನೆಯು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ನಾಗರಿಕರು ಮೃತಪಟ್ಟಿರುವ ಘಟನೆ ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯಲ್ಲಿ ನಡೆದಿದೆ.

ಮೃತಪಟ್ಟವರನ್ನು ನೋಕ್ಫ್ಯಾ ವಾಂಗ್ಡಾನ್ (28) ಮತ್ತು ರಾಮ್ವಾಂಗ್ ವಾಂಗ್ಸು (23) ಎಂದು ಗುರುತಿಸಲಾಗಿದೆ. ತಿರಾಪ್ ನ ಚಾಸಾ ಗ್ರಾಮದಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದ್ದು, ಈರ್ವರು ನದಿಯಲ್ಲಿ ಮೀನುಗಾರಿಕೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಭಯೋತ್ಪಾದಕರು ಎಂದು ಭಾವಿಸಿ ಸೇನೆಯು ಗುಂಡಿನ ದಾಳಿ ನಡೆಸಿದೆ.

vtv vitla
vtv vitla

ಗುಂಡಿನ ದಾಳಿ ವೇಳೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಪರಶೀಲಿಸಿದಾಗ ಅವರು ಉಗ್ರರಲ್ಲ ಎಂಬುದು ಗೊತ್ತಾಗಿದೆ. ತತ್ ಕ್ಷಣ ದಿಬ್ರುಗಢ್‌ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಇಬ್ಬರು ನಾಗರಿಕರನ್ನು ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ತಪ್ಪಾದ ಗುರುತಿನ ಪ್ರಕರಣದಿಂದ ಘಟನೆ ಸಂಭವಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

- Advertisement -

Related news

error: Content is protected !!