Sunday, January 16, 2022
spot_imgspot_img
spot_imgspot_img

ಉಡುಪಿ: ಕೃಷ್ಣ ಮಠಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಭೇಟಿ

- Advertisement -
- Advertisement -

vtv vitla
vtv vitla

ಉಡುಪಿ: ಕರಾವಳಿ ಪ್ರವಾಸದಲ್ಲಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದು, ಶ್ರೀ ಕೃಷ್ಣನ ದರ್ಶನ ಪಡೆದಿದ್ದಾರೆ. ಬಳಿಕ ರಾಜ್ಯಪಾಲರಿಗೆ ಕಡೆಗೋಲು ಶ್ರೀಕೃಷ್ಣ ವಿಶೇಷ ದರ್ಶನ ಮಾಡಿಸಲಾಯಿತು. ದರ್ಶನದ ಬಳಿಕ ಪರ್ಯಾಯ ಈಶಪ್ರಿಯ ತೀರ್ಥಶ್ರೀಪಾದರ ಭೇಟಿಯಾದ ರಾಜ್ಯಪಾಲರು, ಮಠದೊಳಗೆ ಸಮಾಲೋಚನೆ ನಡೆಸಿದರು.

ಈ ವೇಳೆ ಪರ್ಯಾಯ ಅದಮಾರು ಮಠದಿಂದ ರಾಜ್ಯಪಾಲರಿಗೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭ ಶಾಸಕ ರಘುಪತಿ ಭಟ್‌‌, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇಂದು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ರಾಜ್ಯಪಾಲರು 9.45 ಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ನಂತರ ಮುರುಡೇಶ್ವರಕ್ಕೆ ತೆರಳಲಿದ್ದಾರೆ.

vtv vitla
vtv vitla
- Advertisement -

Related news

error: Content is protected !!