- Advertisement -
- Advertisement -
ಉಡುಪಿ: ಉದ್ಯಾವರದ ಸಂಪಿಗೆ ನಗರ ಬಬ್ಬರ್ಯ ಜಡ್ಡುವಿನ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ದಾಳಿ ನಡೆಸಿ ಪೊಲೀಸರು 7 ಜನರನ್ನು ಬಂಧಿಸಿ, ಹುಂಜಗಳನ್ನು ವಶಕ್ಕೆ ಪಡೆದಿದ್ದಾರೆ.

ರವಿಕುಮಾರ್, ಪ್ರಮೋದ್, ಪುಷ್ಪರಾಜ್, ಪ್ರದೀಪ್, ಗಣೇಶ್, ಅರವಿಂದ್, ಧನರಾಜ್ ಸುವರ್ಣ ಬಂಧಿತರಾಗಿದ್ದಾರೆ. ಆರೋಪಿಗಳಿಂದ 7 ಹುಂಜ ಹಾಗೂ ಜೂಜಾಟಕ್ಕೆ ಬಳಸಿದ 9,870 ರೂಪಾಯಿ ನಗದನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಕೊರೋನಾ ನಿಯಮವನ್ನು ಉಲ್ಲಂಘಿಸಿ ಕೋಳಿ ಅಂಕವನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪಿಎಸ್‌ಐ ರಾಘವೇಂದ್ರ ಅವರು ದಾಳಿ ನಡೆಸಲು ನ್ಯಾಯಾಲಯದ ಅನುಮತಿ ಪಡೆದಿದ್ದರು.

ಅಪರಾಧ ವಿಭಾಗದ ಪಿ.ಎಸ್.ಐ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


- Advertisement -