Wednesday, August 26, 2026
spot_imgspot_img
spot_imgspot_img

ಉಡುಪಿ: ಡಿಸಿ-ಎಸ್.ಪಿ ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿಸಿ ವಾಟ್ಸ್ ಆಪ್‌ನಲ್ಲಿ ಹಣಕ್ಕೆ ಬೇಡಿಕೆ

- Advertisement -
- Advertisement -

ಉಡುಪಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ಅವರ ಫೋಟೋ ಬಳಸಿ ವಾಟ್ಸ್ ಆಪ್ ನಕಲಿ ಖಾತೆ ಸೃಷ್ಟಿಸಿ ಆರೋಪಿಗಳು ಹಣವನ್ನು ಕೇಳುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಈ ಹಿಂದೆ ಕೂಡಾ ಇಂತಹ ಘಟನೆ ನಡೆದಿದ್ದು, ಆ ಸಮಯದಲ್ಲಿ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದರು. ಇದೀಗ ಘಟನೆ ಮತ್ತೆ ಮರುಕಳಿಸಿದ್ದು, ಈ ಕುರಿತು ಸೆನ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಕೂರ್ಮರಾವ್ ಹಾಗೂ ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷರಾದ ಅಕ್ಷಯ್ ಎಂ ಹಾಕೆ ರವರ ಹೆಸರು ಮತ್ತು ಫೋಟೋಗಳನ್ನು ಯಾರೋ ದುಷ್ಕರ್ಮಿಗಳು ದುರ್ಬಳಕೆ ಮಾಡಿಕೊಂಡು ವ್ಯಾಟ್ಸಪ್ ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಹಣವನ್ನು ಕೇಳುತ್ತಿದ್ದಾರೆ.

ಇದು ಸಾರ್ವಜನಿಕರನ್ನು ವಂಚಿಸಿ ಹಣ ಮಾಡುವ ಉದ್ದೇಶದಿಂದ ರಚಿಸಿದ ನಕಲಿ ಖಾತೆಯಾಗಿದ್ದು ಸಾರ್ವಜನಿಕರು ಈ ಮೋಸದ ಜಾಲಕ್ಕೆ ಸ್ಪಂದಿಸದಂತೆ ಯಾರು ಕೂಡ ಹಣ ಹಾಕದಂತೆ ಕೋರಲಾಗಿದೆ.

- Advertisement -

Related news

error: Content is protected !!