Monday, June 15, 2026
spot_imgspot_img
spot_imgspot_img

ಇಬ್ಬರು ಮಕ್ಕಳ ಜೊತೆ ತಾಯಿ ನದಿಗೆ ಹಾರಿ ಆತ್ಮಹತ್ಯೆ..!

- Advertisement -
- Advertisement -

ಇಬ್ಬರು ಮಕ್ಕಳ ಸಮೇತ ತಾಯಿ ತುಂಗಭದ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ರಾಣೆಬೆನ್ನೂರು ತಾಲೂಕಿನ ಕೋಡಿಹಾಳ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಡವರನ್ನು ನಗ್ಮಾ ದುಗ್ಗತ್ತಿಗೌಡ್ರು (24), ಮನ್ವಿತಾ (3), ಪವಣಿ (5) ಎಂದು ಗುರುತಿಸಲಾಗಿದೆ.

ಮೂರು ವರ್ಷಗಳ ಹಿಂದೆ ನಗ್ಮಾ ದುಗ್ಗತ್ತಿಗೌಡ್ರು ಹಾಗೂ ಅರುಣ್ ಇಬ್ಬರು ಪ್ರೀತಿಸಿ ಇಂಟರ್ ರಿಲಿಜಿಯನ್ ಮದುವೆಯಾಗಿದ್ದರು. ದುರುದ್ದೇಶದಿಂದ ಮಕ್ಕಳನ್ನು ಕೊಲೆಗೈದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಎಂದು ಪತಿ ಅರುಣ್​ ಕೇಸ್ ದಾಖಲಿಸಿದ್ದ. ಆದರೆ ನಿನ್ನೆ ತುಂಗಭದ್ರ ನದಿಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದವು. ಈ ಸಂಬಂಧ ಕೇಸ್ ದಾಖಲಿಸಿಕೊಂಡ ಕುಮಾರಪಟ್ಟಣಂ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

Related news

error: Content is protected !!