Thursday, June 11, 2026
spot_imgspot_img
spot_imgspot_img

ಉಡುಪಿ: ಸ್ವಾತಂತ್ರ್ಯ ದಿನದ ಪಥಸಂಚಲನದಲ್ಲಿ ಭಾಗಿಯಾದ ಫಾತಿಮಾ ಶೈಖ್..!

- Advertisement -
- Advertisement -

ಉಡುಪಿ: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನ ಪಥಸಂಚಲನದಲ್ಲಿ ಕರ್ನಾಟಕ ಆಂಡ್ ಗೋವಾ ಎನ್‌ಸಿಸಿ ತಂಡವನ್ನು ಉಡುಪಿಯ ಮೆಹಕ್ ಫಾತಿಮಾ ಶೈಖ್ ಪ್ರತಿನಿಧಿಸಿದ್ದಾರೆ. ಈಕೆಯ ಈ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಉಡುಪಿಯ ಎಂಜಿಎಂ ಕಾಲೇಜಿನ ವಿದ್ಯಾರ್ಥಿಯಾಗಿರುವ ಈಕೆ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ನಡೆದ ಐಡಿಸಿ (ಇಂಡಿಪೆಂಡೆಂಟ್ ಡೇ ಕ್ಯಾಂಪ್) ಪೂರ್ವ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿದ್ದು, ಆ.1ರಿಂದ 15ರ ತನಕ ದೆಹಲಿಯಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾದ 42 ಮಂದಿಯ ಪೈಕಿ ಮೆಹಕ್ ಉಡುಪಿಯಿಂದ ಆಯ್ಕೆಯಾದ ಏಕೈಕ ಕೆಡೆಟ್ ಆಗಿದ್ದಾಳೆ. ಕೆಂಪುಕೋಟೆಯಲ್ಲಿ ನಡೆದ ರಾಜ್ಯದ ಸಾಂಪ್ರದಾಯಿಕ ಧಿರಿಸಿನ ಪ್ರದರ್ಶನದಲ್ಲೂ ಈ ತಂಡ ಉತ್ತಮ ಪ್ರದರ್ಶನ ನೀಡಿದೆ.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಎನ್‌ಸಿಸಿಯ ಡೈರಕ್ಟರೇಟ್ ಜನರಲ್ ಲೆಫ್ಟಿನೆಂಟ್ ಗುಲ್ಬಗ್ವಾಲ್ ಸಿಂಗ್, ಆ‌‍ಆರ್‌‍ಎಂ ಅಜಯ್‌ ಭಟ್, ಡಿಡಿಜಿ ಏರ್ ಕಮಾಂಡರ್ ಬಿಎಸ್ ಕನ್ವಾರ್ ಮತ್ತಿತರರನ್ನು ಭೇಟಿಯಾಗುವ ಅವಕಾಶ ದೊರೆತಿದ್ದು, ಇದು ನನ್ನ ಜೀವನದ ಅವಿಸ್ಮರಣೀಯ ನೆನಪುಗಳು ಎಂದು ಮೆಹಕ್ ತಿಳಿಸಿದ್ದಾಳೆ. ಲೀಡಿಂಗ್ ಕೆಡೆಟ್ ರ್‍ಯಾಂಕ್ ಹೊಂದಿರುವ ಮೆಹಕ್ ಉಡುಪಿಯ ಫೌಝಿಯಾ ಶೇಖ್ ಪುತ್ರಿ.

- Advertisement -

Related news

error: Content is protected !!