Thursday, May 2, 2024
spot_imgspot_img
spot_imgspot_img

ಇಂದು ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ಸಾರ್ವಜನಿಕ ಉಚಿತ ವೈದ್ಯಕೀಯ ಶಿಬಿರ

- Advertisement -G L Acharya panikkar
- Advertisement -

ದ.ಕ. ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ (ಲ) ಮಂಗಳೂರುಮರಾಟ ಮಹಿಳಾ ವೇದಿಕೆ ಹಾಗೂ ಮರಾಟಿ ಯುವ ವೇದಿಕೆ ಇದರ ಆಶ್ರಯದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ವೈದ್ಯಕೀಯ ಶಿಬಿರವು ವಿಟ್ಲ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ನಲ್ಲಿ ಸೆ.18 (ಇಂದು) ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.00ರವರೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಡಿ. ಶ್ರೀನಿವಾಸ ನಾಯ್ಕ ಪಡೀಲ್ ಅಧ್ಯಕ್ಷತೆಯನ್ನು ವಹಿಸಲಿರುವರು.

ಶ್ರೀಮತಿ ವೇದಾವತಿ ಎನ್ ವಿಭಾಗೀಯ ಪ್ರಭಂದಕರು ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಲಿ, ಮಂಗಳೂರು ಶಿಬಿರವನ್ನು ಉದ್ಘಾಟಿಸಲಿದ್ದಾರೆ.

ಗೋಪಾಲ ನಾಯ್ಕ (ಮುಖ್ಯಅಧಿಕಾರಿ ವಿಟ್ಲ ಪಟ್ಟಣ ಪಂಚಾಯತ್ಶ್ರೀ ಕಿರಣ್ ಕುಮಾರ್ (ಉಪ ಪ್ರಾಂಶುಪಾಲರು ಪ್ರೌಢಶಾಲಾ ವಿಭಾಗ, ಪದವಿ ಪೂರ್ವ ಕಾಲೇಜು, ಎಟ್ಲ)ಶ್ರೀ ಯನ್, ಕೃಷ್ಣ ನಾಯ್ಕ(ಅಧ್ಯಕ್ಷರು, ಮಹಮಾಯಿ ಮರಾಟಿ ಮಂದಿರ, ನೆಕ್ಕರಕಾಡು, ವಿಟ್ಲ) ಶ್ರೀ ಜೀವನ್ ಅನ್ನಮೂಲೆ(ಅಧ್ಯಕ್ಷರು, ಮರಾಟ ಯುವ ವೇದಿಕೆ (ರಿ.), ವಿಟ್ಲ) ಉಪಸ್ಥಿತರಿರುವರು.

ವೈದ್ಯಕೀಯ ಶಿಬಿರದಲ್ಲಿ ಲಭ್ಯವಿರುವ ಸೇವೆಗಳು

ಸಾಮಾನ್ಯ ರೋಗ ತಜ್ಞರು : ಸಕ್ಕರೆ ಖಾಯಿಲೆ (ಡಯಾಬಿಟೀಸ್), ರಕ್ತದೊತ್ತಡ (ಬಿ.ಪಿ), ECG ತಪಾಸಣೆ,ಸ್ತ್ರೀರೋಗ ತಜ್ಞರುಕೆಮ್ಮು, ಉಬ್ಬಸ ಹಾಗೂ ಎಲ್ಲಾ ವಿಧದ ಸಾಮಾನ್ಯ ರೋಗ ತಪಾಸಣೆ ಲಭ್ಯವಿದೆ.

ಸ್ತ್ರೀಯರಿಗೆ ಸಂಬಂಧಿಸಿದ ಆರೋಗ್ಯ ಮತ್ತು ತೊಂದರೆ ತಪಾಸಣೆ

ಕಣ್ಣಿನ ತಜ್ಞರು: ಕಣ್ಣಿನ ತಪಾಸಣೆಮಕ್ಕಳರೋಗ ತಜ್ಞರು: ಮಕ್ಕಳಿಗೆ ಸಂಬಂಧ ಪಟ್ಟ ತಪಾಸಣೆ, ಚರ್ಮರೋಗ ತಜ್ಞರು, ಮೂಳೆರೋಗ ತಜ್ಞರು, ಚರ್ಮಕ್ಕೆ ಸಂಬಂಧ ಪಟ್ಟ ತಪಾಸಣೆ, ಮೂಳೆಗೆ ಸಂಬಂಧ ಪಟ್ಟ ತಪಾಸಣೆ ನಡೆಯಲಿರುವುದು.

ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗಾಗಿ ಸಂಪರ್ಕಿಸಿ : 9900013877: ಶ್ರೀ ಸುಂದರ ನಾಯ್ಕ್, AGM, F & A ( ಮಂಗಳೂರು ವಿಮಾನ ನಿಲ್ದಾಣ) ಮೊಬೈಲ್ : 9449937125

- Advertisement -

Related news

error: Content is protected !!