Saturday, July 25, 2026
spot_imgspot_img
spot_imgspot_img

ಉಪ್ಪಿನಂಗಡಿ: ಗುಜರಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಮಹಿಳೆ ನಾಪತ್ತೆ.!?

- Advertisement -
- Advertisement -
astr

ಉಪ್ಪಿನಂಗಡಿ: ಗುಜರಿ ಅಂಗಡಿಗೆ ಕೆಲಸಕ್ಕೆಂದು ತೆರಳಿದ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರನ್ನು ಪುಳಿತ್ತಡಿಯ ಆನಂದ ಎಂಬವರ ಪತ್ನಿ ಸರೋಜಾ ಕೆ.ಬಿ ಎನ್ನಲಾಗಿದೆ. ಈಕೆ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಉಪ್ಪಿನಂಗಡಿಯ ಕೂಟೇಲು ಎಂಬಲ್ಲಿರುವ ಸಮೀರ್‍‌ ಎಂಬವರ ಗುಜರಿ ಅಂಗಡಿಗೆ ಸೆ.20ರಿಂದ ಸೆ.22ರವರೆಗೆ ಕೆಲಸಕ್ಕೆ ತೆರಳಿದ್ದವರು ವಾಪಸ್ ಮನೆಗೆ ಬಂದಿರುತ್ತಾರೆ. ಆದರೆ ಸೆ.23ರಂದು ಗುಜರಿ ಅಂಗಡಿಗೆ ಕೆಲಸಕ್ಕೆಂದು ತೆರಳಿದ ಈಕೆ ವಾಪಸ್’ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈಕೆಯನ್ನ ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿ ಸಿಗದಿದ್ದ ಬಳಿಕ ಆಕೆಯ ಪತಿ ಆನಂದ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!