
ವಿದ್ಯಾನಿಧಿ ಡಾ. ವಿದ್ಯಾಭೂಷಣ್, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಂದ ಮೆಚ್ಚುಗೆ ಪಡೆದ ಕಲಾವಿದ



ಪ್ರತಿಭೆ ಅನ್ನೋದು ಕೆಲವರಿಗೆ ರಕ್ತಗತವಾಗಿದ್ದರೆ, ಇನ್ನೂ ಕೆಲವರು ಕಷ್ಟಪಟ್ಟು ಕಲಿತ ವಿದ್ಯೆಯಿಂದ ಪ್ರತಿಭೆಯನ್ನು ತನ್ನಲ್ಲಿ ರೂಪಿಸಿಕೊಳ್ತಾರೆ. ಎಲ್ಲರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಅನ್ನೋದು ಇದ್ದೇ ಇರುತ್ತದೆ. ಆದ್ರೆ ಪ್ರತಿಭೆಯ ಬೆನ್ನಟ್ಟಿ ಸಾಧನೆಯ ಶಿಖರವೇರಿದವರು ಬಹಳಷ್ಟು ಕಡಿಮೆ ಜನ ಮಾತ್ರ. ತಾನೂ ಏನಾದ್ರೂ ಸಾಧಿಸಬೇಕು.. ತನ್ನನ್ನು ಸಮಾಜ ಗುರುತಿಸಿ ಗೌರವಿಸಬೇಕು ಅನ್ನೋ ಛಲದಿಂದ ಒಬ್ಬ ಅದ್ಭುತ ಕಲಾವಿದನಾಗಿ ಗುರುತಿಸಿಕೊಳ್ಳಲು ಆ ಕಲಾವಿದನ ಹಿಂದೆ ಇರುವ ಶ್ರಮ ಅಪಾರ..
ಕರಾವಳಿ ಎಂದರೆ ಅಪಾರ ಕಲೆಗಳ ಜೊತೆ ಹಲವಾರು ಕಲಾವಿದನ್ನೊಳಗೊಂದ ಕಲಾ ಸಾಮ್ರಾಜ್ಯ.. ಕರಾವಳಿಯಲ್ಲಿ ಅದೆಷ್ಟೋ ಕಲಾವಿದರು ತಮ್ಮ ವಿವಿಧ ಕಲೆಗಳ ಮೂಲಕ ಪ್ರಸಿದ್ಧಿಯನ್ನು ಪಡೆಯುತ್ತಾ ಬಂದಿದ್ದಾರೆ.. ಅಂತಹ ಕಲಾವಿದರ ಪಟ್ಟಿಯಲ್ಲಿ ಕರಾವಳಿ ಕಂಡ ಅಧ್ಬುತ ಕಲಾವಿದ ಮನೀಶ್ ಕುತ್ತಾರ್..

ಮನೀಶ್ ಕುತ್ತಾರ್ ಮೂಲತಃ ಮಂಗಳೂರಿನ ಕುತ್ತಾರ್ ನಿವಾಸಿ.. ಸಣ್ಣ ವಯಸ್ಸಿನಿಂದಲೇ ಭಜನೆಗಳನ್ನು ಹಾಡುತ್ತಾ ಶಾಲಾ ವಿಭಾಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡವರು. ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡ ಇವರು ಇಂದು ಅದ್ಭುತ ಸಾಹಿತ್ಯಗಾರನಾಗಿ, ಸಂಗೀತಗಾರನಾಗಿ, ಜೊತೆಗೆ ಗಾಯಕನಾಗಿ ಪ್ರಸಿದ್ಧಿ ಪಡೆದವರು.
ದೇವರನ್ನು ಸದಾ ಮನಸ್ಸಿನಲ್ಲಿ ಪೂಜಿಸಿಕೊಂಡು ತಾನು ಗೀಚುವ ಸಾಹಿತ್ಯಗಳು ಭಕ್ತರನ್ನು ಭಕ್ತಿಯಲ್ಲಿ ತಲ್ಲೀಣಗೊಳಿಸುವಂತೆ ಮಾಡುತ್ತಿವೆ ಇವರ ಭಕ್ತಿ ಪ್ರಧಾನ ಸಾಹಿತ್ಯಗಳು. ತಾನು ಬರೆದ ಸಾಹಿತ್ಯಗಳಿಗೆ ತಾನೇ ರಾಗ ಸಂಯೋಜಿಸಿ ಹಾಡಿದ ಹಾಡುಗಳಂತೂ ಸೂಪರ್ ಹಿಟ್.
ತಾನು ಬೆಳೆದು ತನ್ನವರನ್ನೂ ಬೆಳೆಸುವ ಕಲಾವಿದ ನಿಜವಾದ ಕಲೆಗಾರ ಅನ್ನೊ ಮಾತಿಗೆ ಮನೀಶ್‌ರವರೇ ಸಾಕ್ಷಿ. ತಾನು ಬರೆದ ಸಾಹಿತ್ಯಕ್ಕೆ, ರಾಗಸಂಯೋಜನೆಗೆ ಮಾಡಿ ಕರಾವಳಿಯ ಹಲವು ಉದಯೋನ್ಮುಖ ಗಾಯಕರಿಗೆ ಅವಕಾಶ ಕಲ್ಪಿಸಿ, ಅವರಲ್ಲಿರುವ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

“ದಕ್ಷ ಕ್ರಿಯೇಷನ್” ಬ್ಯಾನರ್ ಅಡಿಯಲ್ಲಿ ಕಲೆಯೆರ್ಕಿ ಕಲ್ಲುರ್ಟಿ, ಗಾನಗಂಗೆ, ಮೈಮೆದ ಪುಂಚ, ಗಿರಿತ ಬಾಲೆ, ಬಂಗಾರ್ ಮನಸ್ ಸೇರಿದಂತೆ ಹಲವಾರು ಸೂಪರ್ ಹಿಟ್ ಭಕ್ತಿಗೇತೆಗಳಿಗೆ ಸಾಹಿತ್ಯ ಬರೆದು ರಾಗ ಸಂಯೋಜಿಸಿ ತನ್ನ ಜೊತೆಗೆ ಹಲವಾರು ಗಾಯಕರಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ.
ತಲಪಾಡಿದ ಅಪ್ಪೆ, ಪುರಲ್ದ ಕುರಲ್ ಸೇರಿದಂತೆ ಹಲವಾರು ಭಕ್ತಿಗೀತೆಗಳಿಗೆ ಸಾಹಿತ್ಯ ಬರೆದು, ಧ್ವನಿಯಾಗಿದ್ದಾರೆ. ಎಲ್ಲಾ ಹಾಡುಗಳು ಲಕ್ಷಕ್ಕೂ ಅಧಿಕ ವೀಕ್ಷಣೆಯೊಂದಿಗೆ ಸೂಪರ್ ಹಿಟ್ ಆಗಿವೆ. ಸಂಗೀತ ಕ್ಷೇತ್ರದ ವಿದ್ಯಾನಿಧಿ ಡಾ. ವಿದ್ಯಾಭೂಷಣ್‌ರವರ ಧ್ವನಿಯಲ್ಲಿ ಮೂಡಿಬರಲಿರುವ ಭಕ್ತಿಗೀತೆಗೆ ಮನೀಶ್ ಕುತ್ತಾರ್‌ರವರು ಸಾಹಿತ್ಯ ಬರೆದು ರಾಗಸಂಯೋಜಿಸಿದ್ದು, ಈ ಹಾಡು ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ. ಹಾಗೂ ಮೈಮೆದ ಪುಂಚ ಹಾಗೂ ಬಂಗಾರ್ ಮನಸ್ ಭಕ್ತಿಗೀತೆಗಳಿಗೆ ಯಕ್ಷಧ್ರುವ ಪಟ್ಲ ಸತೀಶ್ ಧ್ವನಿಯಾಗಿದ್ದು, ಮನೀಶ್‌ರವರ ಸಾಹಿತ್ಯ ಹಾಗೂ ರಾಗ ಸಂಯೋಜನೆಗೆ ಇವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಲವಾರು ವೇದಿಕೆಗಳಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಇವರ ಸಾಧನೆಯನ್ನು ಗುರುತಿಸಿ ಹಲವಾರು ವೇದಿಕೆಗಳು ಸನ್ಮಾನಿಸಿವೆ. ಸಂಗೀತ ಕ್ಷೇತ್ರದಲ್ಲಿ ಅತೀ ಕಿರಿಯ ವಯಸ್ಸಿನಲ್ಲಿ ಸಾಹಿತ್ಯ, ರಾಗ ಸಂಯೋಜನೆ, ಗಾಯನದಲ್ಲಿ ಹೆಸರು ಮಾಡುತ್ತಿರುವ ಮನೀಶ್ ಕರಾವಳಿಯ ಹೆಮ್ಮೆ.