Thursday, September 10, 2026
spot_imgspot_img
spot_imgspot_img

ಕಾರವಾರ: ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗುತ್ತಿದ್ದ ನಟ; ಬೀಚ್ ಸಿಬ್ಬಂದಿಗಳಿಂದ ರಕ್ಷಣೆ

- Advertisement -
- Advertisement -

ಕಾರವಾರ: ಈಜೋದಕ್ಕೆ ಸಮುದ್ರಕ್ಕೆ ಇಳಿದಾಗ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗುತ್ತಿದ್ದ ಸಿನಿಮಾ ನಟರೊಬ್ಬರನ್ನು ಬೀಚ್ ಸಿಬ್ಬಂದಿ ರಕ್ಷಿಸಿದ ಘಟನೆ ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ನಡೆದಿದೆ.

ಗೋಕರ್ಣದ ಕುಡ್ಲೆ ಬೀಚ್ ಗೆ ಹೈದರಾಬಾದ್ ಮೂಲದ ಚಿತ್ರನಟ ಅಖಿಲ್ ರಾಜ್ ಎಂಬುವರು ಇಂದು ತೆರಳಿದ್ದರು. ಸಮುದ್ರದಲ್ಲಿ ಈಜಲು ಹೋಗಿದ್ದಂತ ಸಂದರ್ಭದಲ್ಲಿ ಅಲೆಗೆ ಕೊಚ್ಚಿ ಹೋಗಿ, ರಕ್ಷಣೆಗಾಗಿ ಕೂಗಿಕೊಂಡಿದ್ದರು.

ಅಖಿಲ್ ರಾಜ್ ಕೂಗಿದ್ದನ್ನು, ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದದ್ದನ್ನು ಕಂಡ ಗೋಕರ್ಣ ಅನ್ವೆಂಚರ್ ಸಂಸ್ಥೆಯ ಸಿಬ್ಬಂದಿ ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಜಟ್ ಸ್ಕಿ ವಾಟರ್ ಬೈಕ್ ಮೂಲಕ ರಕ್ಷಿಸಿದ್ದಾರೆ.

- Advertisement -

Related news

error: Content is protected !!