





ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ 55ನೇ ವರ್ಷದ ಮಹಾಗಣೇಶೊತ್ಸವವು ಸೆ.14ಸೋಮವಾರದಿಂದ ಸೆ.16 ಬುಧವಾರದ ತನಕ ಧರ್ಮನಗರ ಸಮಾಜ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.14ಸೋಮವಾರದಂದು ಬೆಳಿಗ್ಗೆ 8.30ಕ್ಕೆ ಶ್ರೀ ಗಣಪತಿ ಹವನ, ಬೆಳಿಗ್ಗೆ 9.30ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠೆ ಮತ್ತು ಉತ್ಸವದ ಉದ್ಘಾಟನೆ ನಡೆಯಲಿದ್ದು,
ದ್ವಜಾರೋಹಣವನ್ನು ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷರಾದ ಎಚ್ ಜಗನ್ನಾಥ ಸಾಲ್ಯಾನ್ , ಉದ್ಘಾಟನೆಯನ್ನು ಬಾಬು ಆಚಾರ್ಯ , ಮೂರ್ತಿ ಪ್ರತಿಷ್ಠೆಯನ್ನು ವೇ|ಮೂ| ಗೋಪಾಲಕೃಷ್ಣ ಭಟ್ ಮಿತ್ತೂರು ನೆರವೇರಿಸಲಿದ್ದಾರೆ. ಮಧ್ಯಾಹ್ನ 11ಕ್ಕೆ ಪೂಜಾ ಸೇವೆ ಪ್ರಾರಂಭಗೊಂಡು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ರಿಂದ ಭಜನಾ ಸೇವೆ, ಸಂಜೆ 6.30ಕ್ಕೆ ರಶಪ್ರಶ್ನೆ ಸ್ಪರ್ಧೆ , ರಾತ್ರಿ 8.20 ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ ಹಾಗೂ ರಾತ್ರಿ 8.30ರಿಂದ ಧರ್ಮನಗರದ ಬಾಲಗೋಕುಲ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಸೆ.15 ಮಂಗಳವಾರದಂದು ಬೆಳಿಗ್ಗೆ ಗಂಟೆ 9 ಕ್ಕೆ ಪೂಜಾ ಸೇವೆ ಪ್ರಾರಂಭಗೊಳ್ಳಲಿದೆ. ಬೆಳಿಗ್ಗೆ 10ರಿಂದ 55 ಕೆ.ಜಿ. ಸಾರ್ವಜನಿಕ ಕಬಡ್ಡಿ ಪಂದ್ಯಾಟ ನಡೆಯಲಿದೆ. ಬೆಳಿಗ್ಗೆ 10.00 ಗಂಟೆಯಿಂದ ಭಜನಾ ಸೇವೆ ನಡೆಯಲಿದ್ದು, ಗಣೇಶೋತ್ಸವ ಸಮಿತಿ ಧರ್ಮನಗರದವರು ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರುಗಲಿದೆ.ಸಂಜೆ 4.00 ಗಂಟೆಗೆ ಶ್ರೀ ರಾಮಾಂಜನೇಯ ಭಜನಾ ತಂಡ ಪೆರ್ನೆ ಇವರಿಂದ ಭಜನಾ ಸೇವೆ, ಸಂಜೆ 6.00 ಗಂಟೆಗೆ ಸಾಮೂಹಿಕ ಕುಂಕುಮಾರ್ಚನೆ, ರಾತ್ರಿ 7.30ಕ್ಕೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ರಾತ್ರಿ 8.00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಶ್ರೀ ಮಹಾಗಣೇಶೋತ್ಸವದ ಸಮಾರೋಪ ದಿನವಾದ ದಿನಾಂಕ ಸೆ. 16 ಬುಧವಾರ ಮುಂಜಾನೆ 9 ಗಂಟೆಗೆ ಪೂಜಾ ಸೇವೆ ಪ್ರಾರಂಭ, ಬೆಳಿಗ್ಗೆ 10 ಗಂಟೆಗೆ
ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಹೂವಿನ ಹಾರ ಸ್ಪರ್ಧೆ, ಅಪರಾಹ್ನ 12.30ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಮಾರೋಪ ಸಮಾರಂಭ – ಬಹುಮಾನ ವಿತರಣೆ ಅಪರಾಹ್ನ 2 ಗಂಟೆಗೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಮಂಗಳೂರು ಎ.ಜೆ ಹಾಸ್ಪಿಟಲ್ ಕನ್ಸಲ್ಟೆಂಟ್ ಗ್ಯಾಸ್ಟ್ರೋ ಸರ್ಜನ್ ಡಾ. ಅಶ್ವಿನ್ ಆಳ್ವ ಅವರು ವಹಿಸಲಿದ್ದು, ಅತಿಥಿಯಾಗಿ ಪುತ್ತೂರಿನ ಯು. ಆರ್ ಪ್ರಾಪಟೀಸ್ ಉದ್ಯಮಿ ಉಜ್ವಲ್ ಪ್ರಭು ಅವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3.00ಕ್ಕೆ ಮಹಾಮಂಗಳಾರತಿ, ದಿಗ್ವಿಜಯೋತ್ಸವ, ವಂದೇ ಮಾತರಂ,ಮೂರ್ತಿ ಜಲಸ್ಥಂಬನ , ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ವಿಷ್ಣುನಗರ ಕುಂಡಡ್ಕ ತಂಡದಿಂದ ವಿಶೇಷ ಆಕರ್ಷಣೆ, ಕುಣಿತ ಭಜನೆ ನಡೆಯಲಿದೆ.
55ನೇ ವರ್ಷದ ಗಣೇಶೋತ್ಸವದ ಅಂಗವಾಗಿ ದಿನಾಂಕ 14-09-2026ನೇ ಸೋಮವಾರ ಬೆಳಿಗ್ಗೆ 9.30ರಿಂದ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.








