Sunday, August 14, 2022
spot_imgspot_img
spot_imgspot_img

ಕಾರ್ಕಳ: ನವಜಾತ ಕಂದಮ್ಮನನ್ನು ತೋಡಿಗೆಸೆದ ಪಾಪಿಗಳು..!

- Advertisement -G L Acharya G L Acharya
- Advertisement -

ಕಾರ್ಕಳ ನಗರದ ಹೊರವಲಯದ ಪತ್ತೊಂಜಿಕಟ್ಟೆ ಪೊಲ್ಲಾರು ಎಂಬಲ್ಲಿ ಕಿರುಸೇತುವೆ ಬಳಿ ಜೂ 21 ರಂದು ಸಂಜೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸೇತುವೆ ಪಕ್ಕದಲ್ಲಿರುವ ಮನೆಯವರಿಗೆ ಮಗು ತೋಡಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಗಾಬರಿಗೊಂಡ ಅವರು ತಕ್ಷಣವೇ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಕೂಡಲೇ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಶೀಲನೆ ನಡೆಸಿ ಬಳಿಕ ಮಗುವಿನ ಮೃತದೇಹವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಿದ್ದಾರೆ.

ಮಗುವನ್ನು ಯಾರೂ, ಯಾಕೆ ಎಸೆದಿದ್ದಾರೆ ಎಂಬ ಕಾರಣ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.

- Advertisement -

Related news

error: Content is protected !!