Friday, September 18, 2026
spot_imgspot_img
spot_imgspot_img

ಕಾಸರಗೋಡು: ವಿವಾಹ ಮೊಟಕುಗೊಂಡ ಹಿನ್ನೆಲೆ ಯುವತಿ ಆತ್ಮಹತ್ಯೆ

- Advertisement -
- Advertisement -

ಕಾಸರಗೋಡು: ವಿವಾಹ ಮೊಟಕುಗೊಂಡ ಹಿನ್ನಲೆಯಲ್ಲಿ ವಿಷ ಸೇವಿಸಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆಮ್ನಾಡ್ ನಲ್ಲಿ ನಡೆದಿದೆ.

ಚೆಮ್ನಾಡ್ ಕೊಂಬನಡ್ಕದ ಮಲ್ಲಿಕಾ(27)ಮೃತಪಟ್ಟವರು.

ಕುಂಬಳೆಯ ಯುವಕನೋರ್ವನನ್ನು ಈಕೆ ಪ್ರೀತಿಸುತ್ತಿದ್ದಳು. ವಿವಾಹವಾಗುವ ಬಗ್ಗೆ ಇಬ್ಬರು ಮನೆಯವರಿಗೆ ತಿಳಿಸಿದ್ದರು. ಆದರೆ ಜಾತಕ ನೋಡಿದಾಗ ಸಾಮ್ಯತೆ ಕಂಡುಬಂದಿಲ್ಲ, ಇದರಿಂದ ವಿವಾಹ ಮೊಟಕುಗೊಂಡಿತ್ತು. ಬೇರೊಂದು ವಿವಾಹ ನಡೆಸುವ ಬಗ್ಗೆ ಮನೆಯವರು ಚಿಂತನೆ ನಡೆಸಿದ್ದರು.

ಇದರಿಂದ ಬೇಸತ್ತ ಮಲ್ಲಿಕಾ ವಿಷ ಸೇವಿಸಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟರು. ತಮಿಳು ನಾಡು ಮೂಲದ ವರಾದ ಇವರ ಹಲವು ವರ್ಷಗಳಿಂದ ಚೆಮ್ನಾಡ್ ನಲ್ಲಿ ವಾಸಿಸುತ್ತಿದೆ. ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!