Tuesday, September 22, 2026
spot_imgspot_img
spot_imgspot_img

ಕಾಸರಗೋಡು: ಸರ್ವಿಸ್ ಸೆಂಟರ್ ನಿಂದ ನಗದು ಕಳ್ಳತನ; ಮಹಿಳೆಯೋರ್ವಳ ಬಂಧನ

- Advertisement -
- Advertisement -

ಕಾಸರಗೋಡು: ಕಾರು ಸರ್ವಿಸ್ ಸೆಂಟರ್ ನಿಂದ ಹಾಡ ಹಗಲೇ ನಗದು ಕಳವುಗೈದ ಘಟನೆಯೊಂದು ಕಾಸರಗೋಡಿನ ಮಾಣಿಕ್ಕೋತ್ ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಪಟ್ಟಂತೆ ಅಲೆಮಾರಿ ಮಹಿಳೆಯೋರ್ವಳನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಗುಂಡಲ್ ಪೇಟೆಯ ಶಿವಕಾಮಿ ಬಂಧಿತ ಮಹಿಳೆ. ಮಣಿಕ್ಕೋತ್ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ವಿನೋದ್ ಎಂಬವರ ಮಾಲಿಕತ್ವದ ಕಾರು ಸರ್ವಿಸ್ ಸೆಂಟರ್ ನಿಂದ ಹಾಡ ಹಗಲೇ 50 ಸಾವಿರ ರೂ. ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಕೆಯನ್ನು ಬಂಧಿಸಲಾಗಿದೆ.

ಸರ್ವಿಸ್ ಸೆಂಟರ್ ನ ಇನ್ನೊಂದು ಕೋಣೆಯಲ್ಲಿ ಇಡಲಾಗಿದ್ದ ನಗದನ್ನು ಕಳವು ಮಾಡಲಾಗಿತ್ತು. ಬ್ಯಾಗ್ ನಲ್ಲಿದ್ದ ನಗದು ನಾಪತ್ತೆಯಾದ ಹಿನ್ನಲೆಯಲ್ಲಿ ಸಿ ಸಿ ಟಿ ವಿ ಕ್ಯಾಮಾರವನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬಳು ನಗದು ಕಳವು ಮಾಡುತ್ತಿರುವುದು ಕಂಡುಬಂದಿದೆ . ಈ ಬಗ್ಗೆ ಹೊಸದುರ್ಗ ಪೊಲೀಸರಿಗೆ ದೂರು ನೀಡಲಾಗಿತ್ತು ಈ ಅಲೆಮಾರಿ ಮಹಿಳೆ ಚೆರ್ವತ್ತೂರಿನಲ್ಲಿ ವಾಸವಾಗಿರುವ ಅಲೆಮಾರಿ ತಂಡದವಳೆಂದು ಗುರುತು ಪತ್ತೆ ಹಚ್ಚಿದ ಪೊಲೀಸರು ಕೃತ್ಯ ನಡೆದು ಗಂಟೆಗಳ ಅವಧಿಯಲ್ಲೇ ಆರೋಪಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Related news

error: Content is protected !!