ಇರಾ ಗ್ರಾಮದ ಕುಕ್ಕಾಜೆ ಕಾಪಿಕಾಡ್ ನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ನೂತನ ತಾಜುಲ್ ಉಲಮಾ ಮಸ್ಜಿದ್’ಗೆ ಶುಕ್ರವಾರ ರಾತ್ರಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಉಸ್ತಾದರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಸ್ಜಿದ್ ಆಡಳಿತ ಸಮಿತಿಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮಸೀದಿಗಳು ಸಮುದಾಯದ ಸಮಗ್ರ ಒಳಿತಿನ ಕೇಂದ್ರಗಳಾಗಬೇಕು. ಧಾರ್ಮಿಕ ಕಾರ್ಯಗಳೊಂದಿಗೆ ಸಾಮಾಜಿಕ ಪರಿವರ್ತನೆಗಳು ಮಸೀದಿಗಳಿಂದಾಗಲಿ ಎಂದು ಹೇಳಿದರು.
ಮಸೀದಿ ಅಧ್ಯಕ್ಷರಾದ ಮುಹಮ್ಮದ್ ಕಾಪಿಕಾಡ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್, ಕೋಶಾಧಿಕಾರಿ ಜಲೀಲುದ್ಧೀನ್, ಸ್ಥಳದಾನಿ ಅಬ್ಬಾಸ್ ಹಾಜಿ KCF, ಗ್ರಾಮ ಪಂಚಾಯತ್ ಸದಸ್ಯರಾದ ಮುಹಮ್ಮದ್, ಗಣ್ಯರಾದ ಮುಹಮ್ಮದ್ ಮುಸ್ಲಿಯಾರ್, ಶೇಖ್ ಅಬ್ದುಲ್ಲಾ ಮುಸ್ಲಿಯಾರ್, ಇಸ್ಮಾಯಿಲ್ ದರ್ಭೆ, ಜಬ್ಬಾರ್ ಕುಕ್ಕಾಜೆ, ಸುಲೈಮಾನ್ ಪಂಜಿಕ್ಕಲ್, ಸಿರಾಜ್ intec, ಸಲಾಂ ಕುಕ್ಕಾಜೆ, ಸಿದ್ದೀಕ್ ಮುಸ್ಲಿಯಾರ್, ಉಸ್ಮಾನ್ ಕುಕ್ಕಾಜೆ ಭಾಗವಹಿಸಿದ್ದರು.
ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿ, ಬಿ.ಎ.ಇಬ್ರಾಹಿಂ ಸಖಾಫಿ ದಾವಣಗೆರೆ ಧನ್ಯವಾದಗೈದರು. ಮಸೀದಿಯ ಇಮಾಂ ಮುಹಮ್ಮದ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು