





ಹುಬ್ಬಳ್ಳಿ: ಮಾನಸಿಕ ಅಸ್ವಸ್ಥನಾಗಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಹೆಂಡತಿ ಹಾಗೂ ಮಕ್ಕಳ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿ ಕುಡಿದ ನಶೆ ಇಳಿದ ಬಳಿಕ ವ್ಯಕ್ತಿ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಇದರಿಂದ 6 ವರ್ಷದ ತನ್ನ ಮಗ ಸಾವನ್ನಪ್ಪಿದ್ದ.
ಗ್ರಾಮದ ಫಕ್ಕೀರಪ್ಪ ಮಾದರ ಏಕಾಏಕಿ ಮನೆಯಲ್ಲಿನ ಟಿವಿ ಸೌಂಡ್ ಜಾಸ್ತಿ ಮಾಡಿ ಕೊಡಲಿಯಿಂದ ತನ್ನ ಹೆಂಡತಿ ಮುದಕವ್ವನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಗಂಡ ಹಲ್ಲೆ ಮಾಡುತ್ತಿದ್ದಂತೆ ಮುದಕವ್ವ ಜೋರಾಗಿ ಕಿರುಚಾಡಲು ಶುರು ಮಾಡಿದ್ದಾಳೆ. ಇದರಿಂದ ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳು ಎದ್ದು ಅಳಲು ಪ್ರಾರಂಭಿಸಿದ್ದರು. ಅಲ್ಲದೆ ತಾಯಿಯನ್ನು ಹಲ್ಲೆಯಿಂದ ಬಿಡಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಆದರೆ ಮಕ್ಕರು ಅಡ್ಡ ಬಂದಿದ್ದಕ್ಕೆ ಕೆರಳಿದ ಫಕೀರಪ್ಪ ಶ್ರಾವಣಿ (8), ಶ್ರೇಯಸ್ (6) ಹಾಗೂ ಸೃಷ್ಟಿ (4) ಮೇಲೆ ಕೈಯಲ್ಲಿದ್ದ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ.
ಫಕ್ಕೀರಪ್ಪ ತನ್ನ ಹೆಂಡತಿ ಮತ್ತು ಮೂವರು ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಒಂದು ಕಡೆ ಹೆಂಡತಿ, ಮತ್ತೊಂದು ಕಡೆ ಮೂವರು ಮಕ್ಕಳು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದರು. ಕೃತ್ಯ ಎಸಗಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡ ಫಕೀರಪ್ಪನಿಗೆ ಬಳಿಕ ತಾನು ಮಾಡಿದ ತಪ್ಪಿನ ಅರಿವಾಗಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಬೆಳ್ಳಂಬೆಳಗ್ಗೆ 6 ಗಂಟೆಯ ಸುಮಾರಿಗೆ ಫಕೀರಪ್ಪನ ಮನೆಯಿಂದ ಬರುತ್ತಿದ್ದ ಟಿವಿ ಶಬ್ದ ಕೇಳಿ ಅಕ್ಕ-ಪಕ್ಕದ ಮನೆಯವರು ಬಾಗಿಲು ಬಡಿದಿದ್ದಾರೆ. ಆದರೆ ಯಾರು ಕೂಡಾ ಬಾಗಿಯಲು ತೆರೆಯದ ಹಿನ್ನೆಲೆ ನೆರೆಹೊರೆಯವರು ಬಾಗಿಲು ಮುರಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಗ್ರಾಮಸ್ಥರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂರು ಮಕ್ಕಳು ಹಾಗೂ ಮುದಕವ್ವನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.