





ನವ ವಿವಾಹಿತ ಹನಿಮೂನ್‌ಗೆ ಹೋಗಿದ್ದ ವೇಳೆ ಯಾರೂ ಊಹಿಸಲಾಗದ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಕುದುರೆ ಸವಾರಿ ಮಾಡುತ್ತಿದ್ದಾಗ ಬಿದ್ದು ಸಾವನ್ನಪ್ಪಿದ್ದಾನೆ ನವ ವಿವಾಹಿತ. ಮೃತ ವ್ಯಕ್ತಿಯನ್ನು ಮೊಹಮ್ಮದ್ ಕಾಶಿಫ್ ಇಮ್ತಿಯಾಜ್ ಶೇಖ್ ಎಂದು ಗುರುತಿಸಲಾಗಿದೆ.
ಶೇಕ್ ತನ್ನ ಪತ್ನಿ ಹಾಗೂ ಮತ್ತೊಬ್ಬ ದಂಪತಿಯೊಂದಿಗೆ ಹನಿಮೂನ್‌ಗೆ ತೆರಳಿದ್ದ ವೇಳೆ ದುರ್ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಜನವರಿ 25 ರಂದು ಮಾಥೆರಾನ್‌ನಲ್ಲಿ ನಾಲ್ವರು ಬೇರೆ ಬೇರೆ ಕುದುರೆಗಳಲ್ಲಿ ಸವಾರಿ ಮಾಡುತ್ತಿದ್ದರು. ಅವರು ಮಹಾರಾಷ್ಟ್ರ ನಗರದ ಸನ್ ಶೇಡ್ ಹೋಟೆಲ್‌ನಿಂದ ಸುಮಾರು 70 ಮೀ. ದೂರದಲ್ಲಿದ್ದಾಗ ಕುದುರೆ ಏಕಾಏಕಿ ವೇಗವಾಗಿ ಓಡತೊಡಗಿತ್ತು. ಇದರಿಂದ ಸವಾರ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ.
ಅವರನ್ನು ಮೊದಲು ಮಾಥೆರಾನ್‌ನ ಬಿಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ವ್ಯಕ್ತಿಯನ್ನು ಉಲ್ಲಾಸ್‌ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರವಾದ ಗಾಯಗಳಿಂದಾಗಿ ಅವರು ಶನಿವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ
ಕುದುರೆ ಸವಾರಿಯ ಸಂದರ್ಭದಲ್ಲಿ ಪ್ರವಾಸಿಗರಿಗೆ ಹೆಲ್ಮೆಟ್ ನೀಡಬೇಕು ಎಂಬ ನಿಯಮವಿದ್ದರೂ ಅದನ್ನು ಹೆಚ್ಚಿನವರು ಪಾಲಿಸುತ್ತಿಲ್ಲ. ಹಲವು ಬಾರಿ ಪ್ರವಾಸಿಗರು ಹೆಲ್ಮೆಟ್ ಬಳಸಲು ನಿರಾಕರಿಸುತ್ತಾರೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.