Wednesday, August 5, 2026
spot_imgspot_img
spot_imgspot_img

ಗಡಿಯಲ್ಲಿ 1,700 ಕಿಮೀ ಹೆದ್ದಾರಿ ನಿರ್ಮಾಣ ಕೇಂದ್ರ ಚಿಂತನೆ; ಚೀನಾಗೆ ದೊಡ್ಡ ಎದಿರೇಟು

- Advertisement -
- Advertisement -

ನವದೆಹಲಿ: ಗಡಿಯಲ್ಲಿ ಚೀನಾ ಉಪಟಳ ಹೆಚ್ಚಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಗಡಿಯಲ್ಲಿ1,748 ಕಿಮೀ ಹೆದ್ದಾರಿ ನಿರ್ಮಾಣಕ್ಕೆ ಮುಂದಾಗಿದೆ. ಆ ಮೂಲಕ ಸಮರ್ಥವಾಗಿ ಚೀನಾಕ್ಕೆ ಎದುರೇಟು ಕೊಡುವುದಕ್ಕೆ ಸಿದ್ದತೆ ನಡೆಸಿದೆ.

ಅರುಣಾಚಲ ಪ್ರದೇಶದಲ್ಲಿ ಭಾರತ – ಟಿಬೆಟ್‌ – ಚೀನಾ – ಮಯನ್ಮಾರ್‌ ಗಡಿಯ ಸಮೀಪದಲ್ಲಿ 27 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಹೆದ್ದಾರಿ ನಿರ್ಮಾಣಗೊಳ್ಳಲಿದೆ ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 2024-25ರಲ್ಲಿ ಕಾಮಗಾರಿ ಆರಂಭಿಸಿ ಎರಡು ವರ್ಷದೊಳಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ಗಡಿಗೆ ಕೇವಲ 20 ಕಿಮೀ ವ್ಯಾಪ್ತಿಯಲ್ಲಿ ಹೆದ್ದಾರಿ ನಿರ್ಮಾಣ ಮಾಡುವ ಬಗ್ಗೆ ಕೇಂದ್ರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಇನ್ನು ಪ್ರಸ್ತಾವಿತ 1,748 ಕಿಮೀ ಉದ್ದದ ಹೆದ್ದಾರಿಯು ದ್ವಿಪಥವಾಗಿದ್ದು, ಗಡಿ ಪ್ರದೇಶದಿಂದ ಜನ ವಲಸೆ ಹೋಗದಂತೆ ತಡೆಯುವ ಉದ್ದೇಶವನ್ನೂ ಇದು ಹೊಂದಿದೆ. ಮಂತ್ರಾಲಯ ರಸ್ತೆ ಸಾರಿಗೆ ಸಂಸ್ಥೆಯ ಮುಖಾಂತರ ಎನ್‌ಎಚ್‌-913 ಹೆದ್ದಾರಿ ನಿರ್ಮಾಣಗೊಳ್ಳಲಿದೆ. ಇನ್ನು ಈ ಹೆದ್ದಾರಿ ನಿರ್ಮಾಣವಾದರೆ ಸೇನಾ ಪಡೆಗಳಿಗೆ, ಸೇನಾ ವಾಹನಗಳಿಗೆ ಸಂಚಾರ ಹೆಚ್ಚು ಸುಲಭವಾಗಲಿದೆ. ಗಡಿಯಲ್ಲಿ ಆಗಾಗ ಕ್ಯಾತೆ ತೆಗೆಯುವ ಚೀನಾಗೆ ಪ್ರಬಲ ಪ್ರತಿರೋಧ ತೋರಲೂ ಇದು ಸಹಕಾರಿಯಾಗಲಿದೆ.

ಬಾಂಬ್ಡೀಲಾದಿಂದ ನಫ್ರಾ, ಹುರಿ ಮತ್ತು ಮೊನಿಗಾಂಗ್‌ನ ಮೂಲಕ ಹೆದ್ದಾರಿ ಹಾದು ಹೋಗಲಿದೆ. ಚೀನಾ ಗಡಿಗೆ ಹತ್ತಿರದಲ್ಲಿರುವ ಜಿಡೋ ಮತ್ತು ಚೆಂಕ್ವೆಂಟಿ ಪ್ರದೇಶಗಳ ಮೂಲಕ ಹೆದ್ದಾರಿ ಹಾದು ಹೋಗಲಿದೆ.

- Advertisement -

Related news

error: Content is protected !!