Sunday, July 6, 2025
spot_imgspot_img
spot_imgspot_img

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕರಾಗಿ ‘ವಿಟಿವಿ’ ಯ ನಿರ್ದೇಶಕರಾದ ‘ರಾಮ್ ದಾಸ್ ಶೆಟ್ಟಿ’ ವಿಟ್ಲ ಆಯ್ಕೆ

- Advertisement -
- Advertisement -

ವಿಟ್ಲ: ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕರಾಗಿ ‘ವಿಟಿವಿ’ ಯ ನಿರ್ದೇಶಕರಾದ ರಾಮ್ ದಾಸ್ ಶೆಟ್ಟಿ ವಿಟ್ಲ ಯವರು ಆಯ್ಕೆಯಾಗಿದ್ದಾರೆ.

ಯುವ ಸಂಸ್ಥಾಪಕ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿ ಯವರ ಆದೇಶದ ಮೇರೆಗೆ ರಾಜ್ಯಾಧ್ಯಕ್ಷರಾದ ಆರ್. ಚಂದ್ರಪ್ಪ ಹಾಗೂ ಕಾರ್ಯಧ್ಯಕ್ಷರಾದ ಅಣ್ಣಪ್ಪ ಓಲೇಕಾರ ರವರು ರಾಮ್ ದಾಸ್ ಶೆಟ್ಟಿ ವಿಟ್ಲ ರವರನ್ನು ರಾಜ್ಯ ಸಂಚಾಲಕರನ್ನಾಗಿ ಆಯ್ಕೆ ಮಾಡಿದ್ದಾರೆ.

‘ವಿಟಿವಿ’ ಯ ನಿರ್ದೇಶಕರಾದ ರಾಮ್ ದಾಸ್ ಶೆಟ್ಟಿಯವರು ಕಂಬಳಬೆಟ್ಟು ಧರ್ಮನಗರ ಶ್ರೀ ಗಣೇಶೋತ್ಸವ ಸಮಿತಿಯ ಸಕ್ರೀಯ ಸದಸ್ಯರಾಗಿ, ಶ್ರೀರಾಮ್ ಫ್ರೆಂಡ್ಸ್ ವಿಟ್ಲ ಇದರ ಗೌರವ ಸಲಹೆಗಾರರಾಗಿ ಸೇವೆಸಲ್ಲಿಸಿದ್ದಾರೆ.

ಪ್ರಸ್ತುತ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಇದರ ಉಪಾಧ್ಯಕ್ಷರಾಗಿದ್ದಾರೆ.

- Advertisement -

Related news

error: Content is protected !!