Sunday, April 28, 2024
spot_imgspot_img
spot_imgspot_img

ವಿಟ್ಲ: ಭಾಸ್ಕರ್ ಕೊಲೆ ಪ್ರಕರಣ; 9 ತಿಂಗಳ ಬಳಿಕ ಆರೋಪಿ ಯೋಗೀಶ್ ಗೌಡನಿಗೆ ಜಾಮೀನು

- Advertisement -G L Acharya panikkar
- Advertisement -

ವಿಟ್ಲ:9 ತಿಂಗಳ ಹಿಂದೆ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕುಮೇರು ಎಂಬಲ್ಲಿ ಮನೆಯಲ್ಲಿ ರಾತ್ರಿ ಮಲಗಿದ್ದ ವ್ಯಕ್ತಿಯನ್ನು ಮೃತನ ಪತ್ನಿಯೊಂದಿಗೆ ಸೇರಿ ಕೊಲೆ ಮಾಡಿದ ಆರೋಪದಡಿ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನದಲ್ಲಿದ್ದಾತನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಫೆ.26ರಂದು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಚೈತನ್ಯ ಕುಮೇರು ನಿವಾಸಿ ಅರವಿಂದ ಭಾಸ್ಕರ್ ಅವರನ್ನು ಪತ್ನಿ ಆಶಾ ಕೆ ಮತ್ತು ಆಶಾ ಕೆ ಅವರ ಪ್ರಿಯಕರ ಯೋಗೀಶ್ ಗೌಡ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಯ ಕುರಿತು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಆರಂಭದಲ್ಲಿ ಆರೋಪಿ ಆಶಾ ಕೆ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದೀಗ ಪ್ರಕರಣ 1ನೇ ಆರೋಪಿ ಯೋಗೀಶ್ ಗೌಡನಿಗೆ ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರವ ವಕೀಲರಾದ ಮಾಧವ ಪೂಜಾರಿ, ಚಿದಾನಂದ, ರಾಕೇಶ್ ಬಲ್ನಾಡ್ ವಾದಿಸಿದ್ದರು.

- Advertisement -

Related news

error: Content is protected !!