Saturday, July 5, 2025
spot_imgspot_img
spot_imgspot_img

ಜೈಲಿನಿಂದ ಬಿಡುಗಡೆಯಾದ ಶಾರುಖ್ ಪುತ್ರ ಆರ್ಯನ್ ಖಾನ್

- Advertisement -
- Advertisement -

ಮುಂಬೈ: ಇಂದು ಅಕ್ಟೋಬರ್ 2 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನಿಂದ ಅಕ್ಟೋಬರ್ 2 ರಂದು ಬಂಧಿಸಲ್ಪಟ್ಟಿದ್ದ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್, ಅಂತಿಮವಾಗಿ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದರು.

ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ಗೌರಿ ಖಾನ್ ಶನಿವಾರ ಬೆಳಿಗ್ಗೆ ಆರ್ಥರ್ ರೋಡ್ ಜೈಲಿಗೆ ತೆರಳಿ ಮಗ ಬಿಡುಗಡೆಗಾಗಿ ಕಾದಿದ್ದರು ಎನ್ನಲಾಗಿದೆ. ಇದಕ್ಕೂ ಮುನ್ನ ಆರ್ಥರ್ ರೋಡ್ ಜೈಲಿನ ಅಧೀಕ್ಷಕ ನಿತಿನ್ ವಾಯ್ಚಲ್ ಹೇಳಿಕೆಯಲ್ಲಿ, ‘ನಾವು ಆರ್ಯನ್ ಖಾನ್ ಅವರ ಬಿಡುಗಡೆ ಆದೇಶವನ್ನು ಸ್ವೀಕರಿಸಿದ್ದೇವೆ.

ಅವರ ಬಿಡುಗಡೆಯ ಪ್ರಕ್ರಿಯೆಯು 1-2 ಗಂಟೆಗಳಲ್ಲಿ ಪೂರ್ಣಗೊಳ್ಳಬೇಕು ಅಂತ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಏತನ್ಮಧ್ಯೆ, ತಂದೆ ಶಾರುಖ್ ಖಾನ್ ತಮ್ಮ ಮಗನನ್ನು ಬರಲು ಆರ್ಥರ್ ರೋಡ್ ಜೈಲಿಗೆ ತಲುಪಲು ತಮ್ಮ ನಿವಾಸ ಮನ್ನತ್‌ನಿಂದ ಹೊರಟಿದ್ದಾರೆ. ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಗುರುವಾರ ಆರ್ಯನ್‌ಗೆ ಜಾಮೀನು ನೀಡುವಾಗ, ಬಾಂಬೆ ಹೈಕೋರ್ಟ್ ಅವರಿಗೆ 14 ಜಾಮೀನು ಷರತ್ತುಗಳನ್ನು ವಿಧಿಸಿ, ಜೈಲಿನಿಂದ ಬಿಡುಗಡೆ ಮಾಡಲು ಆದೇಶ ನೀಡಿದೆ.

ಐದು ಪುಟಗಳ ಆದೇಶದಲ್ಲಿ, ಜಾಮೀನು ಪಡೆದಿರುವ ಆರ್ಯನ್ ಖಾನ್ ಮತ್ತು ಅವರ ಇಬ್ಬರು ಸಹ ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಅವರನ್ನು ತಲಾ ಒಂದು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್‌ನಲ್ಲಿ ಒಂದು ಅಥವಾ ಇಬ್ಬರ ಶ್ಯೂರಿಟಿಯೊಂದಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೈಕೋರ್ಟ್ ಹೇಳಿತ್ತು. ಅದರಂತೆ ಇಂದು ಅವರು ಹೊರಗೆ ಬಂದಿದ್ದಾರೆ.

- Advertisement -

Related news

error: Content is protected !!