Tuesday, April 30, 2024
spot_imgspot_img
spot_imgspot_img

ಐಸಿಸಿ ವಿಶ್ವಕಪ್: ಫೈನಲ್‌ಗೆ ಎಂಟ್ರಿಕೊಟ್ಟ ಪಾಕಿಸ್ತಾನ

- Advertisement -G L Acharya panikkar
- Advertisement -

ಐಸಿಸಿ ವಿಶ್ವಕಪ್ ಕ್ರಿಕೆಟ್ ಟಿ ಟ್ವೆಂಟಿ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ ಗೆಲುವು ಸಾಧಿಸಿದ ಪಾಕ್ ಪಡೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ ಪಾಕಿಸ್ತಾನ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ ತಂಡದ ವಿಲಿಯಮ್ಸ್ ಅವರ ಆಟದ ನೆರವಿನಿಂದ 152 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು,

ಪಾಕಿಸ್ತಾನ ವೇಗದ ಬೌಲರ್ ಗಳ ಕರಾರುವಕ್ಕೂ ದಾಳಿಗೆ ತತ್ತರಿಸಿದ ನ್ಯೂಜಿಲ್ಯಾಂಡ್ ಆಗಾಗ ವಿಕೆಟ್ ಕಳೆದುಕೊಂಡಿತು. ಆದರೂ 152 ರನ್‌ ಬಾರಿಸುವಲ್ಲಿ ಯಶಸ್ವಿಯಾಯಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನದ ರಿಜ್ವಾನ್ ಮತ್ತು ನಾಯಕ ಬಾಬರ್ ಜೋಡಿ ಮುರಿಯದ ಜೊತೆಯಾಟ ಪಾಕಿಸ್ತಾನಕ್ಕೆ ಗೆಲುವಿನ ಭರವಸೆಯನ್ನ ಮೂಡಿಸಿತು. 12ನೇ ಓವರ್ ನಲ್ಲಿಯೇ ನೂರರ ಗಡಿ ದಾಟಿದ ಪಾಕಿಸ್ತಾನಕ್ಕೆ ನ್ಯೂಜಿಲ್ಯಾಂಡ್ ನ ವೇಗಿ ಬೋಲ್ಟ್ ಜೊತೆ ಆಟವನ್ನ ಮುರಿಸಿದರು. ಪಾಕಿಸ್ತಾನ ಟಿ20 ವಿಶ್ವಕಪ್ ನ ಫೈನಲ್ ಗೇರಿದ ಮೊದಲ ತಂಡವಾಗಿದೆ.

ನಾಳೆ ಭಾರತಕ್ಕೆ ಪ್ರತಿಷ್ಠೆಯ ದಿನ..!
ನಾಳೆ ನಡೆಯುವ ಸೆಮಿ ಫೈನಲ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಭಾರತ ಜಯಶಾಲಿಯಾಗಬೇಕೆಂಬುವುದು ಒಕ್ಕೊರಲ ಆಸೆಯಾಗಿದೆ. ಒಂದು ವೇಳೆ ಭಾರತ ನಾಳೆ ವಿಜಯಶಾಲಿಯಾದರೆ ಪಾಕ್‌ನೊಂದಿಗೆ ಫೈನಲ್‌ನಲ್ಲಿ ಸೆಣಸಾಡಲಿದೆ. ಈ ಪಂದ್ಯವೂ ಸಹ ರಣರೋಚಕವಾಗಿರಲಿದೆ.

- Advertisement -

Related news

error: Content is protected !!