Tuesday, April 30, 2024
spot_imgspot_img
spot_imgspot_img

ಕೇಂದ್ರದಿಂದ ಕೆಲವು ಕ್ಷೇತ್ರಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಸಿದ್ಧತೆ

- Advertisement -G L Acharya panikkar
- Advertisement -

ನವದೆಹಲಿ: ಕೇಂದ್ರ ಸರ್ಕಾರವು ಈ ಬಾರಿ ದೇಶಾದ್ಯಂತ ಏಕರೂಪದ ಲಾಕ್​ಡೌನ್ ಜಾರಿಗೊಳಿಸಿಲ್ಲ. ಆದರೆ, ಕಳೆದ ತಿಂಗಳಿನಿಂದ ರಾಜ್ಯ ಸರ್ಕಾರಗಳೇ ತಮ್ಮ ರಾಜ್ಯಗಳ ವ್ಯಾಪ್ತಿಯಲ್ಲಿ ಲಾಕ್ ಡೌನ್ ಘೋಷಿಸಿಕೊಂಡಿವೆ. ಹೀಗಾಗಿ ಈ ಬಾರಿ ಕೇಂದ್ರ ಸರ್ಕಾರವು ಯಾವುದೇ ಆರ್ಥಿಕ ರೀಲೀಫ್ ನೀಡುವ ಪ್ಯಾಕೇಜ್ ಘೋಷಿಸಲ್ಲ ಎನ್ನುವ ಮಾತುಗಳಿದ್ದವು. ಆದರೆ ಈ ಲೆಕ್ಕಾಚಾರ ಸುಳ್ಳಾಗಿಸುವಂತೆ ಇದೀಗ ಕೇಂದ್ರ ಸರ್ಕಾರವು ಆರ್ಥಿಕ ಪ್ಯಾಕೇಜ್ ಘೋಷಣೆಗೆ ಸಿದ್ದತೆ ನಡೆಸಿದೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರೇ ದೇಶಾದ್ಯಂತ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್​ಡೌನ್ ಘೋಷಿಸಿದ್ದರು. ದೀಢೀರನೇ ಎದುರಾದ ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾದ ಕ್ಷೇತ್ರಗಳಿಗೆ ಕಳೆದ ವರ್ಷ ಕೇಂದ್ರ ಸರ್ಕಾರವೇ ಬರೋಬ್ಬರಿ ₹ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿತ್ತು. ರೈತರು, ಕೈಗಾರಿಕೆ, ಕಾರ್ಮಿಕರು, ಸಣ್ಣ, ಮಧ್ಯಮ ಕೈಗಾರಿಕೆಗಳು, ಬ್ಯಾಂಕ್​ಗಳು, ಮೀನುಗಾರರು, ಹೈನುಗಾರರು ಸೇರಿದಂತೆ ವಿವಿಧ ವಲಯಗಳಿಗೆ ಪ್ಯಾಕೇಜ್ ಘೋಷಿಸಲಾಗಿತ್ತು.

ಕೇಂದ್ರ ಸರ್ಕಾರ ಈ ಬಾರಿಯೂ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಘೋಷಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಆರ್ಥಿಕ ಪ್ಯಾಕೇಜ್ ಘೋಷಿಸಲು ಕೇಂದ್ರ ಹಣಕಾಸು ಇಲಾಖೆಯು ಈಗಾಗಲೇ ಚರ್ಚೆ ಆರಂಭಿಸಿದೆ. ಈ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸದ್ಯದಲ್ಲೇ ಹಣಕಾಸು ತಜ್ಞರೊಂದಿಗೆ ಚರ್ಚೆ ನಡೆಸಲಿದ್ದಾರೆ. ಮುಖ್ಯವಾಗಿ ಪ್ರವಾಸೋದ್ಯಮ, ಟ್ರಾವೆಲ್ಸ್ ಮತ್ತು ವಿಮಾನಯಾನ ಕ್ಷೇತ್ರಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.

ಜೊತೆಗೆ ಲಾಕ್​ಡೌನ್​ನಿಂದ ಬಾಗಿಲು ಮುಚ್ಚಿರುವ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳ ಕ್ಷೇತ್ರಕ್ಕೂ ಹಣಕಾಸಿನ ನೆರವು ಸಿಗುವ ಸಾಧ್ಯತೆ ಇದೆ. ಲಾಕ್​ಡೌನ್​ನಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಇತರ ಕ್ಷೇತ್ರಗಳು ಮತ್ತು ವಲಯಗಳಿಗೂ ನೆರವಿನ ಪ್ಯಾಕೇಜ್ ಸಿಗುವ ಸಾಧ್ಯತೆ ಇದೆ. ಕೇಂದ್ರದ ಹಣಕಾಸು ಇಲಾಖೆಯಲ್ಲಿ ಪ್ಯಾಕೇಜ್ ಘೋಷಣೆ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಯಾವಾಗ ಪ್ಯಾಕೇಜ್ ಘೋಷಿಸಲಾಗುತ್ತೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಈ ಬಾರಿಯ ಪ್ಯಾಕೇಜ್ ಗಾತ್ರ ಎಷ್ಟು ಎಂಬುದನ್ನು ಇನ್ನೂ ಕೇಂದ್ರ ಹಣಕಾಸು ಇಲಾಖೆ ಅಂತಿಮಗೊಳಿಸಿಲ್ಲ.

ನೆರವಿಗೆ ಕೈಗಾರಿಕಾ ವಲಯ ಆಗ್ರಹಈ ವರ್ಷವೂ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕೆಂದು ಕೈಗಾರಿಕಾ ವಲಯ ಆಗ್ರಹಿಸಿದೆ. ಎಂಎಸ್‌ಎಂಇಗಳಿಗೆ ಸಾಲದ ಮೊರಟೋರಿಯಂ (ಸಾಲ ಪಾವತಿ ಅವಧಿ ವಿಸ್ತರಣೆ) ನೀಡಿಕೆ, ಸಾಲದ ಬಡ್ಡಿ ಕಡಿತ ಸೇರಿದಂತೆ 17 ಶಿಫಾರಸ್ಸುಗಳನ್ನು ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸರ್ಕಾರಕ್ಕೆ ಮಾಡಿದೆ.

ಕೊರೊನಾದ ಎರಡನೇ ಅಲೆಯು ಮೊದಲ ಅಲೆಗಿಂತ ವೇಗವಾಗಿ ಹರಡುತ್ತಿದೆ. ಭಾರತದ ಎಲ್ಲ ಮನೆಗಳಲ್ಲೂ ತೊಂದರೆಯನ್ನು ಉಂಟು ಮಾಡುತ್ತಿದೆ. ಇಂಥ ಸಂಕಷ್ಟ ಸಮಯದಲ್ಲಿ ಆರ್ಥಿಕತೆ, ವ್ಯಾಪಾರ, ಕೈಗಾರಿಕೆಯನ್ನು ಬೆಂಬಲಿಸಲು ಆರ್ಥಿಕ ನೆರವಿನ ಪ್ಯಾಕೇಜ್ ಘೋಷಣೆಗೆ ಶಿಫಾರಸ್ಸು ಮಾಡಿದ್ದೇವೆ ಎಂದು ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಹೇಳಿದೆ.

ಕೊರೊನಾದ ಎರಡನೇ ಅಲೆಯ ಲಾಕ್​ಡೌನ್​ನಿಂದ ದೇಶದ ಜಿಡಿಪಿಯು 2021-22ರಲ್ಲಿ ಶೇ 10.5ರ ದರದಲ್ಲಿ ಬೆಳವಣಿಗೆ ಆಗಬಹುದು ಎಂದು ರಿಸರ್ವ್ ಬ್ಯಾಂಕ್ ಅಂದಾಜಿಸಿದೆ. ಆರ್ಥಿಕ ಬೆಳವಣಿಗೆಗೆ ವೇಗ ನೀಡಲು ಈಗ ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಅಗತ್ಯ ಇದೆ ಎಂದು ಆರ್ಥಿಕ ತಜ್ಞರು ಕೂಡ ಹೇಳುತ್ತಿದ್ದಾರೆ.

driving
- Advertisement -

Related news

error: Content is protected !!