Monday, August 31, 2026
spot_imgspot_img
spot_imgspot_img

ಟಿವಿ ನೋಡಬೇಡ ಎಂದು ಪೋಷಕರು ಬೈದಿದ್ದಕ್ಕೆ ಯುವಕ ಆತ್ಮಹತ್ಯೆ

- Advertisement -
- Advertisement -
vtv vitla
vtv vitla

ಬೆಂಗಳೂರು: ಟಿವಿ ನೋಡಬೇಡ ಎಂದು ಪೋಷಕರು ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಶರಣಾದ ಯುವಕ ಬೆಂಗಳೂರಿನ ಜೆ.ಜೆ.ನಗರದಲ್ಲಿನ ಸೈಯದ್ ಸಾಹಿಲ್ (23) ಎನ್ನಲಾಗಿದೆ.

ಸಾದಿಲ್ ಮನೆಯಲ್ಲೇ ಇರುತ್ತಿದ್ದ. ನಿನ್ನೆ ರಾತ್ರಿ ಕೆಲಸದಿಂದ ಬಂದಿದ್ದ ಸಾದಿಲ್ ತಂದೆ, ಯಾವಾಗಲು ಮನೆಯಲ್ಲಿ ಟಿವಿ ನೋಡಿಕೊಂಡು ಇರುತ್ತೀಯ. ಕೆಲಸ ಮಾಡಲ್ವಾ? ದುಡಿಯಲ್ವಾ? ಎಂದು ಪ್ರಶ್ನಿಸಿ ಬೈದಿದ್ದಾರೆ. ಈ ವೇಳೆ ಟಿವಿ ರಿಮೋಟ್ ಬಿಸಾಕಿ ಅಡುಗೆ ಮನೆಗೆ ತೆರಳಿದ್ದ ಸಾಹಿಲ್, ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಇರಿದುಕೊಂಡಿದ್ದಾನೆ. ನಂತರ ಪೋಷಕರು ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಳವಾಗಿ ಗಾಯಗೊಂಡು ತೀವ್ರ ರಕ್ತ ಸ್ರಾವದಿಂದ ಸಾಹಿಲ್ ಮೃತಪಟ್ಟಿದ್ದಾನೆ. ಈ ಘಟನೆ ಬಗ್ಗೆ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!