- Advertisement -
- Advertisement -
ತ್ರಿಶೂರು: ಕೇರಳದ ತ್ರಿಶೂರು ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಗಂಡು- ಹೆಣ್ಣು ಬೇರ್ಪಡಿಸಿ ಅಡ್ಡ ಗೋಡೆ ರೀತಿಯಲ್ಲಿ ಬಟ್ಟೆ ಕಟ್ಟಿ ತರಗತಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಮುಜಾಹಿದ್ ವಿಸ್ದಂ ಎಂಬ ಸಂಘಟನೆ ಈ ತರಗತಿ ನಡೆಸಿದ್ದು, ಇದರ ವಿರುದ್ದ ವ್ಯಾಪಕ ಪ್ರತಿಭಟನೆ ಉಂಟಾಗಿದೆ. ಇದೇ ವೇಳೆ ತಮಗೂ ಈ ತರಗತಿಗೂ ಯಾವುದೇ ಸಂಬಂಧ ಇಲ್ಲ ಎಂದು ಕಾಲೇಜು ಯುನಿಯನ್‌ಗಳು ತಿಳಿಸಿವೆ.
ಮುಜಾಹಿದ್ ವಿಸ್ದಂ ಆಶ್ರಯದಲ್ಲಿ ಈ ತರಗತಿ ನಡೆದಿದ್ದು, ವಿದ್ಯಾರ್ಥಿಗಳನ್ನು ಗಂಡು- ಹೆಣ್ಣು ರೀತಿಯಲ್ಲಿ ಬೇರ್ಪಡಿಸಿ ಮದ್ಯದಲ್ಲಿ ಬಟ್ಟೆ ಕಟ್ಟಿ ಅಡ್ಡಗೋಡೆ ನಿರ್ಮಿಸಿ ತರಗತಿ ನಡೆಸಲಾಗಿತ್ತು. ಮುಜಾಹಿದ್ ವಿಸ್ದಂ ಕಾರ್ಯಕರ್ತರೇ ಈ ತರಗತಿಯ ಚಿತ್ರಗಳನ್ನು ಸಾಮಾಜಿಕ ಮಾದ್ಯಮಗಳಲ್ಲಿ ಪ್ರಕಟಿಸಿದ್ದರು. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಘಟನೆಯ ಬಗ್ಗೆ ಇಂಟಲಿಜೆನ್ಸ್ ತನಿಖೆ ಆರಂಭಗೊಂಡಿದೆ ಎಂದು ತಿಳಿದುಬಂದಿದೆ.
- Advertisement -