Thursday, August 6, 2026
spot_imgspot_img
spot_imgspot_img

ದಾವೂದ್‌ ಗ್ಯಾಂಗ್‌ ನ ಬಂಟ ಫಾಹೀಮ್‌ ಮಚ್‌ಮಾಚ್‌ ಕೋವಿಡ್‌ ಗೆ ಬಲಿ

- Advertisement -
- Advertisement -

ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌, ಅಂಡರ್‌ ವರ್ಲ್ಡ್‌ ಡಾನ್‌ ದಾವೂದ್‌ ಇಬ್ರಾಹಿಂ ಮತ್ತು ಛೋಟಾ ಶಕೀಲ್‌ ಸಹಚರ ಫಾಹೀಮ್‌ ಮಚ್‌ಮಾಚ್‌ ಕೋವಿಡ್‌ ಗೆ ಬಲಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಶುಕ್ರವಾರ ರಾತ್ರಿ ಪಾಕಿಸ್ತಾನದ ಕರಾಚಿಯಲ್ಲಿ ನಿಧನನಾಗಿದ್ದು ಈತ ಹಲವು ವರ್ಷಗಳಿಂದ ದಾವೂದ್‌ ಹಾಗೂ ಛೋಟಾ ಶಕೀಲ್‌ ಜೊತೆ ವಾಸಿಸುತ್ತಿದ್ದ ಎಂದು ಹೇಳಲಾಗುತ್ತಿದೆ.

ಫಾಹೀಮ್‌ ಕೋವಿಡ್‌ ನಿಂದ ಮೃತಪಟ್ಟಿದ್ದಾನೆ ಎಂದು ಕೆಲವರು ಹೇಳುತ್ತಿದ್ದರೆ, ಛೋಟಾ ಶಕೀಲ್‌ ಟೀಂ ಮಾತ್ರ ಆತ ಹೃದಯಾಘಾತದಿಂದ ದಕ್ಷಿಣ ಆಫ್ರಿಕಾದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳುತ್ತಿದೆ.

ಒಟ್ಟಾರೆ ದಾವೂದ್‌ ಗ್ಯಾಂಗ್‌ ನ ಮತ್ತೊಂದು ಕೊಂಡಿ ಇದೀಗ ಕಳಚಿದಂತಾಗಿದೆ ಎಂಬ ಮಾತುಗಳು ಮುಂಬೈ ಅಂಡರ್‌ ವರ್ಲ್ಡ್‌ ನಲ್ಲಿ ಕೇಳಿಬರುತ್ತಿದೆ. ಮುಂಬೈ ಭೂಗತ ಲೋಕದಲ್ಲಿ ಫಾಹೀಮ್‌ ತನ್ನದೇ ಹಿಡಿತ ಹೊಂದಿದ್ದ ಹಾಗೂ ದಾವೂದ್‌ ನ ನಂಬಿಕಸ್ಥ ಬಂಟನಾಗಿದ್ದ.

- Advertisement -

Related news

error: Content is protected !!