Monday, June 22, 2026
spot_imgspot_img
spot_imgspot_img

ದೀಪಾವಳಿಯ ದಿನದಂದೇ ನಡೆಯಿತು ಘೋರ ಹತ್ಯೆ; ಪೊಲೀಸ್ ಪೇದೆಯ ಪುತ್ರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ!

- Advertisement -
- Advertisement -

ಕಲಬುರ್ಗಿ: ದೀಪಾವಳಿಯ ದಿನದಂದೇ, ಪೊಲೀಸ್ ಪೇದೆಯ ಪುತ್ರನೊಬ್ಬನನ್ನು ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವಂತ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಮೃತ ಯುವಕ ಅಭಿಷೇಕ್(25) ಎಂದು ತಿಳಿದುಬಂದಿದೆ.

ಹುಡುಗಿಯ ವಿಚಾರಕ್ಕೆ ಉಂಟಾದಂತ ವೈಮನಸ್ಸು, ಹಳೆಯ ದ್ವೇಷಕ್ಕೆ ತಿರುಗಿ, ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ದುರ್ಷ್ಕರ್ಮಿಗಳು ಸಾವಿರಾರು ಜನರ ಮುಂದೆಯೇ, ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಾನ್ಸ್ ಟೇಬಲ್ ಒಬ್ಬರ ಪುತ್ರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ಹತ್ಯೆಯ ದೃಶ್ಯಾವಳಿ ದಾಖಲಾಗಿದ್ದು, ಅದರ ಆಧಾರದ ಮೇಲೆ ಶೀಘ್ರವೇ ಆರೋಪಿಗಳನ್ನು ಬಂಧಿಸೋದಾಗಿ ಡಿಸಿಪಿ ಶ್ರೀನಿವಾಸಲು ತಿಳಿಸಿದ್ದಾರೆ.

- Advertisement -

Related news

error: Content is protected !!