Sunday, June 29, 2025
spot_imgspot_img
spot_imgspot_img

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ನೇಣು ಬಿಗಿದು ಪತ್ನಿ ಆತ್ಮಹತ್ಯೆ..!

- Advertisement -
- Advertisement -

ಬೆಂಗಳೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಂದ್ರಹಳ್ಳಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮಾನಸ (25) ಎಂದು ಗುರುತಿಸಲಾಗಿದೆ.

ಗಂಡನ ಮನೆಯಲ್ಲಿ ವಾಸವಿದ್ದ ಮಾನಸ ಭಾನುವಾರ ಸಂಜೆ 4 ಗಂಟೆಯ ವೇಳೆಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಯಾನಿನಲ್ಲಿ ನೇತಾಡುವ ಮುನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.

6 ವರ್ಷದ ಹಿಂದೆ ದಿಲೀಪ್ ಜೊತೆ ಮಾನಸ ವಿವಾಹ ನಡೆದಿತ್ತು. ದಂಪತಿಗೆ 5 ವರ್ಷದ ಒಂದು ಹೆಣ್ಣು ಮಗು ಇದೆ. ಕಳೆದ ಒಂದೂವರೆ ವರ್ಷದಿಂದ ದಿಲೀಪ್‌ ಬೇರೊಂದು ಮಹಿಳೆಯ ಸಹವಾಸ ಮಾಡಿದ್ದಾನೆ. ಈ ವಿಚಾರಕ್ಕೆ ಪತಿ, ಪತ್ನಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಈ ವಿಚಾರಕ್ಕೆ ಬೇಸತ್ತು ಮಾನಸ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್‌ ಮಾಡಲಾಗಿದ್ದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!