Sunday, May 5, 2024
spot_imgspot_img
spot_imgspot_img

ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಕಂಬಳಬೆಟ್ಟು ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ದಿನಾಂಕ 08/01/2024 ರಂದು ಕಂಬಳಬೆಟ್ಟು ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆಯಲ್ಲಿ ನಡೆಸಲಾಯಿತು

.ಸಭೆಯ ಅಧ್ಯಕ್ಷತೆಯನ್ನು ಕಂಬಳಬೆಟ್ಟು ಶಾಲೆಯ ಆಯಿಶತ್ ಮುಫೀದ ಅವರು ವಹಿಸಿದ್ದರು.

ಗ್ರಾಮದ ಕಂಬಳಬೆಟ್ಟು ,ನಾಟೆಕಲ್ಲು , ಕುಶಾಲನಗರ ಹಾಗೂ ಜನಪ್ರಿಯ ಶಾಲೆಯ ಮಕ್ಕಳು ಭಾಗವಹಿಸಿ ಕಂಬಳಬೆಟ್ಟು ಪೇಟೆಯಲ್ಲಿ ಜಾತ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಟ್ಟರು.

ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡತ್ತಾರ್ ಅವರು ಗ್ರಾಮದ ಪ್ರತೀ ಮಗುವಿಗೂ ಆರೋಗ್ಯದಾಯಕ ವಾತಾವರಣ ಕಲ್ಪಿಸುವುದು, ಮಕ್ಕಳಿಗೆ ಸುಂದರವಾದ ಬಾಲ್ಯವನ್ನು ಕಲ್ಪಿಸಿಕೊಟ್ಟು ಉತ್ತಮ ಪ್ರಜೆಯನ್ನಾಗಿ ರೂಪಿಸುವ ಜವಾಬ್ದಾರಿ ನಾಗರಿಕ ಸಮಾಜದ ನಮ್ಮೆಲ್ಲರ ಕರ್ತವ್ಯ ಎಂದರು. ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಯ ಕುರಿತು ದ.ಕ ಮಕ್ಕಳ ರಕ್ಷಣಾ ಘಟಕದ ವಜೀದ್ ಅಹಮ್ಮದ್ ಅವರು ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಪ್ರತಿಭಾ ಕಾರಂಜಿ ಮತ್ತು ಕ್ರೀಡೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ,ಹಾಗೂ ರಸಪ್ರಶ್ನೆ ವಿಜೇತರು ಮಕ್ಕಳ ಹಕ್ಕುಗಳ ಬಗ್ಗೆ ಭಾಷಣ ಮಾಡಿದವರನ್ನು ಗ್ರಾಮ ಪಂಚಾಯತ್ ವತಿಯಿಂದ ಗುರುತಿಸಲಾಯಿತು. ಹಾಗೂ ಮಕ್ಕಳ ಕೆಲವು ಬೇಡಿಕೆಗಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಸ್ಥಳದಲ್ಲೇ ಉತ್ತರಿಸಿ ಸಮಸ್ಯೆ ಬಗೆಹರಿಸುವ ಬಗ್ಗೆ ಹಾಗೂ ನಿಯಮಾನುಸಾರ ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿ ತಿಳಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಯ.ಕೆ ಪ್ರಾಸ್ತಾವಿಕ ಭಾಷಣ ಮಾಡಿದರು , ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಮಹಾಬಲೇಶ್ವರ ಭಟ್ , ಪ್ರೇಮಲತಾ ಪಟ್ಲ, ಸಾಬಿರ , SDMC ಅಧ್ಯಕ್ಷರಾದ ಅದ್ದೂರು, CRP ಜ್ಯೋತಿ , ಕಂಬಳಬೆಟ್ಟು ಶಾಲ ಮುಖ್ಯೋಪಾಧ್ಯಾಯಿನಿ ವಾರಿಜ , ವಿಟ್ಲ ಸಮುದಾಯ ಆಸ್ಪತ್ರೆಯ ಕೀರ್ತಿ ನರ್ಸ್, CHO ಸಂಜಯ್, ಶಾಲೆಗಳ ಅಧ್ಯಾಪಕ ವೃಂದ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

- Advertisement -

Related news

error: Content is protected !!